ಗಂಗಾವತಿ(ಕೊಪ್ಪಳ): ಅಪ್ರಾಪ್ತನೊಬ್ಬ ಪ್ರೀತಿಯ ನೆಪದಲ್ಲಿ ಹಾಗೂ ಮದುವೆಯಾಗುವ ನಂಬಿಕೆ ಹುಟ್ಟಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕಾರಟಗಿ ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಹದಿನೇಳು ವರ್ಷದ ಹುಡುಗನ ಮೇಲೆ ಬಾಲಕಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಆತ ಸಲುಗೆಯಿಂದಿದ್ದು ಆಗಾಗ ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮಾತನಾಡಿಸುವುದು, ಮನೆಗೆ ಬರುವುದು ಮಾಡುತ್ತಿದ್ದ. ನಿನಗೆ 18 ನನಗೆ 21 ವರ್ಷವಾದ ಮೇಲೆ ಮದುವೆಯಾಗೋಣ ಎಂದು ನಂಬಿಸಿದ್ದಾನೆ. 8-9 ತಿಂಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ಬಂದು ಬೇಡ ಎಂದರೂ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ: ಮಂಗಳೂರು: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿ ಖುಲಾಸೆ