ETV Bharat / state

ಶೀಘ್ರವೇ ಆಂಧ್ರ-ತೆಲಂಗಾಣ ಸಿಎಂ ಭೇಟಿ ಮಾಡಲಾಗುವುದು.. ಸಚಿವ ರಮೇಶ ಜಾರಕಿಹೊಳಿ - K. Chandrasekhara Rao

ಜಲಾಶಯ ನಿರ್ಮಾಣ ಸಂಬಂಧ ಈ ಮೊದಲು ಇದ್ದ ಶೇ.65 ರಾಜ್ಯದ ಪಾಲು, ಶೇ.35 ನೆರೆಯ ರಾಜ್ಯದ ಪಾಲಿನಂತೆ ಅಂತಾರಾಜ್ಯ ನೀರಿನ ಒಪ್ಪಂದವನ್ನೇ ಮುಂದುವರೆಸಲಾಗುವುದು. ಅದಕ್ಕಾಗಿ ಅತಿ ಶೀಘ್ರ ರಾಜ್ಯದಿಂದ ಆಂಧ್ರ ಮತ್ತು ತೆಲಂಗಾಣದ ನೀರಾವರಿ ಇಲಾಖೆಯ ಅಧಿಕಾರಿ, ಸಚಿವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು..

Minister Ramesh Jarakiholi
ಸಚಿವ ರಮೇಶ ಜಾರಕಿಹೊಳಿ
author img

By

Published : Jun 26, 2020, 7:50 PM IST

ಗಂಗಾವತಿ: ಕನಕಗಿರಿ ತಾಲೂಕಿನ ನವಲಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸಮಾನಾಂತರ ಜಲಾಶಯಕ್ಕೆ ಸಂಬಂಧಿಸಿದಂತೆ ಶೀಘ್ರವೇ ರಾಜ್ಯದಿಂದ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ತಾಲೂಕಿನ ದಾಸನಾಳ ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ ನಾಲೆ ಆಧುನೀಕರಣ ಹಾಗೂ ಕೃಷಿ ಸಶಕ್ತೀಕರಣ ಯೋಜನೆಯಡಿ ಕೈಗೊಳ್ಳಲಾಗಿದ್ದ ಎಡದಂಡೆ ಕಾಲುವೆಯ ಸಿಸಿ ಲೈನಿಂಗ್ ಮತ್ತು ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ಸಚಿವ ರಮೇಶ ಜಾರಕಿಹೊಳಿ..

ನವಲಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ 34 ಟಿಎಂಸಿ ಸಾಮರ್ಥ್ಯದ ಸಮಾನಾಂತರ ಜಲಾಶಯಕ್ಕೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ಸರ್ವೇ, ಅಂದಾಜು, ನಾಲ್ಕಾರು ದಿನ ತಡವಾದ್ರೂ ಪರವಾಗಿಲ್ಲ. ಈ ವಿಷಯದಲ್ಲಿ ಯಾರಿಗೂ ಬೇಗ ಮುಗಿಸುವಂತೆ ಒತ್ತಡ ಹೇರುವುದಿಲ್ಲ. ಡಿಪಿಆರ್ ಸಂದರ್ಭದಲ್ಲಿ ಏನಾದರೂ ತಪ್ಪು ನುಸುಳಿದರೆ ಇಡೀ ಯೋಜನೆ ತಪ್ಪಾಗುತ್ತದೆ. ನೂರಾರು ವರ್ಷಗಳ ಕಾಲ ಜಲಾಶಯ ಬಾಳಿಕೆ ಬರಬೇಕು. ಜನರಿಗೆ ಅದರಿಂದ ಉಪಯೋಗವಾಗಬೇಕು ಎಂದರು.

ಜಲಾಶಯ ನಿರ್ಮಾಣ ಸಂಬಂಧ ಈ ಮೊದಲು ಇದ್ದ ಶೇ.65 ರಾಜ್ಯದ ಪಾಲು, ಶೇ.35 ನೆರೆಯ ರಾಜ್ಯದ ಪಾಲಿನಂತೆ ಅಂತಾರಾಜ್ಯ ನೀರಿನ ಒಪ್ಪಂದವನ್ನೇ ಮುಂದುವರೆಸಲಾಗುವುದು. ಅದಕ್ಕಾಗಿ ಅತಿ ಶೀಘ್ರ ರಾಜ್ಯದಿಂದ ಆಂಧ್ರ ಮತ್ತು ತೆಲಂಗಾಣದ ನೀರಾವರಿ ಇಲಾಖೆಯ ಅಧಿಕಾರಿ, ಸಚಿವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೇ ಮುಖ್ಯಮಂತ್ರಿಗಳಾದ ಕೆ.ಚಂದ್ರಶೇಖರರಾವ್ ಹಾಗೂ ಜಗನ್​ ಮೋಹನ ರೆಡ್ಡಿ ಅವರನ್ನು ಭೇಟಿಯಾಗಿ ಹಣಕಾಸು ಅನುಮೋದನೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.