ETV Bharat / state

ಭತ್ತ ಹಾಳಾದ ಪ್ರದೇಶಕ್ಕೆ ನೀವ್ಯಾಕೆ ಭೇಟಿ ನೀಡಿಲ್ಲ? ಡಿಸಿ ವಿರುದ್ಧ ಸಚಿವ ಬಿ ಸಿ ಪಾಟೀಲ್​​ ಗರಂ.. - ಕೊಪ್ಪಳದಲ್ಲಿ ಭಾರೀ ಮಳೆ

ಮಳೆಯಿಂದ ಗಂಗಾವತಿ ಭಾಗದ 75 ಸಾವಿರ ಎಕರೆ ಭೂಮಿಯ ಬೆಳೆ ನಾಶವಾಗಿದ್ರೂ ಯಾಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಅಂತ ಸಚಿವ ಬಿ.ಸಿ. ಪಾಟೀಲ್​​ ಕೊಪ್ಪಳ ಡಿಸಿ ವಿರುದ್ಧ ಹರಿಹಾಯ್ದಿದ್ದಾರೆ.

minister bc patil outrage against koppala dc
ಡಿಸಿ ವಿರುದ್ಧ ಸಚಿವ ಬಿಸಿ ಪಾಟೀಲ್​​ ಗರಂ
author img

By

Published : Apr 9, 2020, 2:30 PM IST

ಕೊಪ್ಪಳ : ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್ ಅವರ ಮೇಲೆ ಕೃಷಿ ಇಲಾಖೆ ಸಚಿವ ಬಿ ಸಿ ಪಾಟೀಲ್ ಗರಂ ಆದ ಘಟನೆ ನಡೆಯಿತು.

ಗಂಗಾವತಿ ಮಾರ್ಗವಾಗಿ ಕೊಪ್ಪಳ ಜಿಲ್ಲಾಡಳಿತ ಭವನಕ್ಕೆ ಸಚಿವರು ಆಗಮಿಸಿದ ಕೂಡಲೇ ಡಿಸಿ ವಿರುದ್ಧ ಸಚಿವರು ಆಕ್ರೋಶಗೊಂಡರು. ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಬೆಳೆ ಹಾನಿಗೊಳಗಾಗಿದೆ. ಕೃಷಿ ಸಚಿವನಾಗಿ ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಕೃಷಿ ಸಚಿವರು ಬಂದರೂ ನೀವು ಯಾಕೆ ಸ್ಥಳಕ್ಕೆ ಬರಲಿಲ್ಲ? ನಿಮಗೆ ಜವಾಬ್ದಾರಿ ಇಲ್ಲವಾ? 75 ಸಾವಿರ ಎಕರೆ ಭೂಮಿಯಲ್ಲಿನ ಬೆಳೆ ಹಾಳಾಗಿದೆ.

ಇಲ್ಲಿ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ಎಂದು ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು. ಇಲ್ಲಿ ಮುಖ್ಯವಾದ ಕೆಲಸವಿದ್ದ ಕಾರಣ ನಾನು ಬರಲಾಗಲಿಲ್ಲ. ಎಸಿಯವರನ್ನು ಸ್ಥಳಕ್ಕೆ ಕಳಿಸಿದ್ದೆ ಎಂದು ಡಿಸಿ ಸುನೀಲ್‌ಕುಮಾರ್ ಸಮಜಾಯಿಷಿ ನೀಡಿದರೂ ಸಚಿವ ಪಾಟೀಲ್ ಸಮಾಧಾನಗೊಳ್ಳಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.