ಗಂಗಾವತಿ: ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಆಗ್ರಹಕ್ಕೆ ಮಣಿದು ಸಚಿವ ಆನಂದ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾನಿರತರ ಅಹವಾಲು ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂಟ್ ಅಟ್ ಸೈಟ್ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೋಮವಾರ ಅಥವಾ ಮಂಗಳವಾರದೊಳಗೆ ಆದೇಶಕ್ಕೆ ಪ್ರಯತ್ನಿಸಲಾಗುವುದು. ಮೃತ ಯುವಕನ ಕುಟುಂಬಕ್ಕೆ ಇಲಾಖೆಯಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ಕೊಡಿಸಲಾಗುವುದು ಎಂದರು.
ಓದಿ: ಚಿರತೆ ದಾಳಿಗೆ ಯುವಕ ಬಲಿ: ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಕೇವಲ ಗಂಗಾವತಿ ಮಾತ್ರವಲ್ಲ ಸಾಕಷ್ಟು ಕಡೆ ಹುಲಿ, ಚಿರತೆ, ಕರಡಿ ದಾಳಿ ಹೆಚ್ಚಾಗಿದೆ. ಈ ಬಗ್ಗೆ ಸರ್ಕಾರವೂ ಸಾಕಷ್ಟು ಬಾರಿ ಚರ್ಚಿಸಿದೆ. ಆದರೆ ಶೂಟ್ ಅಟ್ ಸೈಟ್ ಎಂದು ತಕ್ಷಣಕ್ಕೆ ಆದೇಶ ಮಾಡಲು ಆಗುವುದಿಲ್ಲ. ಇದಕ್ಕೆ ಕೆಲ ಕಾನೂನು ತೊಡಕು ಇದ್ದು, ಅದನ್ನು ಮಾಡಬೇಕಿದೆ ಎಂದರು.