ಕುಷ್ಟಗಿ : ಉದ್ಯೋಗ ಅರಸಿ ಗೋವಾಗೆ ಹೋಗಿದ್ದ 24 ಮಂದಿ ಕೂಲಿ ಕಾರ್ಮಿಕರನ್ನು ಗೋವಾ ಸರ್ಕಾರಿ ಬಸ್ ಮೂಲಕ ಕರ್ನಾಟಕಕ್ಕೆ ವಾಪಸ್ ಕರೆ ತರಲಾಯಿತು.
ಗೋವಾದಿಂದ ಹೊರಡುವಾಗ ಪ್ರತಿಯೊಬ್ಬರ ಕೈಮೇಲೆ ಕೂಡ ಕ್ವಾರಂಟೈನ್ ಸೀಲ್ ಹಾಕಲಾಗಿತ್ತು. ರಾಜ್ಯಕ್ಕೆ ಬಂದಾಗ ಅವರನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ, ಕರ್ನಾಟಕದಲ್ಲಿ ಕೂಡ ಕ್ವಾರಂಟೈನ್ ಸೀಲ್ ಹಾಕಿ ಮನೆಯಲ್ಲಿ ಇರಲು ಸೂಚಿಸಿ ಅವರವರ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
ಯಾರೂ ಮನೆಯಿಂದ ಆಚೆ ಹೋಗದೆ, ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ.