ಕುಷ್ಟಗಿ(ಕೊಪ್ಪಳ): ಬ್ರೇಕ್ ರಿಪೇರಿ ಮಾಡುತ್ತಿರುವಾಗಲೇ ಟಿಪ್ಪರ್ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಟ್ಟಣ ಹೊರವಲಯದ ಕೃಷ್ಣಗಿರಿ ಕಾಲೋನಿಯ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಪರಶುರಾಮ್ ಗ್ಯಾರೇಜ್ನ ಶಿವಪ್ಪ ರಾಮಣ್ಣ ಬೂದರ (33) ಮೃತ ಮೆಕ್ಯಾನಿಕ್ ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಶಿವಪ್ಪ ಟಿಪ್ಪರ್ ಅಡಿಯಲ್ಲಿ ಮಲಗಿ ಬ್ರೇಕ್ ರಿಪೇರಿ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಟಿಪ್ಪರ್ ಚಾಲಕ ವಾಹನವನ್ನು ಸ್ಟಾರ್ಟ್ ಮಾಡಿದ್ದರಿಂದ ಟಿಪ್ಪರ್ 30 ಅಡಿ ಮುಂದೆ ಚಲಿಸಿದ್ದು, ಟೈರ್ ತಲೆ ಮೇಲೆ ಹರಿದು ಮೆಕ್ಯಾನಿಕ್ ಸ್ಥಳದಲ್ಲೇ ಮೃತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮೆಕ್ಯಾನಿಕ್ ಶಿವಪ್ಪನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಈ ಬಗ್ಗೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಬದಿ ಡ್ರಗ್ಸ್ ಮಾರುತ್ತಿದ್ದ ತಾಂಜೇನಿಯಾದ ಮಹಿಳೆ ಬಂಧನ