ETV Bharat / state

ಗಂಗಾವತಿ: ಭಿಕ್ಷಾಟನೆ ಹಣದಿಂದ ಎರಡು ಜೋಡಿಗಳಿಗೆ ಮದುವೆ ಮಾಡಿಸಿದ ಮಂಗಳಮುಖಿ! - etv bharat karnataka

ಮಂಗಳಮುಖಿಯೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಜೋಡಿಗಳಿಗೆ ಮದುವೆ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Etv Bharatmangala-mukhi-jamuna-helped-two-couples-to-get-married-in-koppal
ಕೊಪ್ಪಳ: ಭಿಕ್ಷಾಟನೆ ಹಣದಿಂದ ಎರಡು ಜೋಡಿಗಳಿಗೆ ಮದುವೆ ಮಾಡಿಸಿದ ಮಂಗಳಮುಖಿ!
author img

By ETV Bharat Karnataka Team

Published : Dec 11, 2023, 6:56 PM IST

Updated : Dec 11, 2023, 9:37 PM IST

ಮಂಗಳಮುಖಿ ಜಮುನಾ ಪ್ರತಿಕ್ರಿಯೆ

ಗಂಗಾವತಿ: ಸಮಾಜದಲ್ಲಿ ಮಂಗಳಮುಖಿಯರನ್ನು ಕಡೆಗಣಿಸುವ ವ್ಯವಸ್ಥೆ ಇನ್ನೂ ಜೀವಂತವಾಗಿ ಇದೆ. ಸಮಾಜದ ಮುಖ್ಯವಾಹಿನಿಗೆ ಬರಲು ಮಂಗಳಮುಖಿಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರೆ ಮಂಗಳಮುಖಿಯೊಬ್ಬರು ತನ್ನ ಸ್ವಂತ ಖರ್ಚಿನಲ್ಲಿ ಎರಡು ನವ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾಗಿದ್ದಾರೆ. ಹೌದು, ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಮಂಗಳಮುಖಿ ಜಮುನಾ ಎಂಬುವವರು ಭಿಕ್ಷಾಟನೆಯಿಂದ ಬಂದ ಹಣದಿಂದ ತನ್ನ ಗ್ರಾಮದ ಬಡ ಜೋಡಿಗಳಿಗೆ ಮದುವೆ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಈ ಕುರಿತು ಮಂಗಳಮುಖಿ ಜಮುನಾ ಮಾತನಾಡಿ, "ನಾನು ಕಳೆದ ನಾಲ್ಕು ವರ್ಷಗಳಿಂದ ಭಿಕ್ಷಾಟನೆ ಮಾಡಿ ಸ್ವಲ್ಪ ಹಣವನ್ನು ನಾನು ಇಟ್ಟುಕೊಂಡು, ಉಳಿದ ಹಣವನ್ನು ಬಡವರಿಗೆ ದಾನ ಮಾಡುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಮದುವೆಗೆ ಬೇಕಾದ ವಸ್ತ್ರಗಳು, ತಾಳಿ ಮತ್ತು ಊಟದ ವೆಚ್ಚವನ್ನು ನಾನೇ ಭರಿಸಿ ಮಾದುವೆಗಳನ್ನು ಮಾಡಿಸುತ್ತಿದ್ದೇನೆ. ನಾನು ಅನಾಥ ಮಕ್ಕಳಿಗೆ ಮತ್ತು ಬಡವರಿಗೆ ಸಹಾಯ ಮಾಡುತ್ತಿದ್ದೇನೆ. ಸಮಾಜದಲ್ಲಿ ನಮ್ಮನ್ನು ಕಪ್ಪು ಚುಕ್ಕೆಯಾಗಿ ನೋಡುತ್ತಾರೆ. ನಾವು ಬಸ್​​ನಲ್ಲಿ ಕುಳಿತಾಗ ನಮ್ಮ ಅಕ್ಕಪಕ್ಕ ಯಾರು ಬಂದು ಕುಳಿತು ಕೊಳ್ಳುವುದಿಲ್ಲ. ನಮಗೆ ವೈವಾಹಿಕ ಜೀವನ ಇಲ್ಲ. ಹೀಗಾಗಿ ಬಡವರಿಗೆ ಮದುವೆ ಮಾಡಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಇದ್ದರೆ ಇನ್ನು ಹೆಚ್ಚಿನ ರೀತಿಯಲ್ಲಿ ಒಳ್ಳೆ ಕಾರ್ಯಗಳನ್ನು ಮಾಡುತ್ತೇನೆ" ಎಂದು ಹೇಳಿದರು.

ಇನ್ನು ಮಂಗಳಮುಖಿ ಜಮುನಾ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆನ್ನೂರು ಗ್ರಾಮದಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ಮೊದಲ ಮಂಗಳಮುಖಿ ಎಂಬ ಇತಿಹಾಸ ನಿರ್ಮಿಸಿದ್ದರು. ಈ ಸೋಲಿನಿಂದ ಧೃತಿಗೆಡದ ಅವರು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಎಂಎ ಪದವಿ ಪರೀಕ್ಷೆ ಬರೆಯುವ ಮೂಲಕ ಪ್ರೇರಣೆಯಾದ ತೃತೀಯ ಲಿಂಗಿ ದಿವ್ಯಾ

ತರಕಾರಿ ಮಾರಿ ಸ್ವಾವಲಂಬನೆ ಜೀವನ ಸಾಗಿಸುತ್ತಿರುವ ಮಂಗಳಮುಖಿ(ಬಾಗಲಕೋಟೆ): ಇತ್ತೀಚಿಗೆ, ಬಾಗಲಕೋಟೆಯ ಮಂಗಳಮುಖಿಯೊಬ್ಬರು ಭಿಕ್ಷಾಟನೆ ಬಿಟ್ಟು ತರಕಾರಿ ವ್ಯಾಪಾರ ಮಾಡಿಕೊಂಡು ಸ್ವಾವಲಂಬನೆ ಜೀವನ ಸಾಗಿಸುವ ಮೂಲಕ ಗಮನ ಸೆಳೆದಿದ್ದರು. ಸನಮ್ ಹಾಜಿ ಎಂಬ ಮಂಗಳಮುಖಿ ಜೀನನೋಪಾಯಕ್ಕಾಗಿ ತಮ್ಮದೇ ಆದ ತರಕಾರಿ ಅಂಗಡಿಯೊಂದನ್ನು ಇಟ್ಟುಕೊಂಡು ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದರು. ಸನಮ್ ಆರಂಂಭದಲ್ಲಿ ಹೆಣ್ಣಿನ ಹಾವ - ಭಾವ ಮಾಡುತ್ತಿದ್ದರಿಂದ ಮನೆಯವರರಿಂದಲೂ ತಿರಸ್ಕೃತಗೊಂಡು ಊರು ಬಿಟ್ಟಿದ್ದರು. ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಊರಿಗೆ ಬಂದ ಸನಮ್, ಇಲ್ಲಿಯೇ ತರಕಾರಿ ಅಂಗಡಿ ಇಟ್ಟುಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದರು.

Last Updated : Dec 11, 2023, 9:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.