ಗಂಗಾವತಿ: ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದರ್ಶನ ಪಡೆಯಲು ಹೊರಟ ವ್ಯಕ್ತಿಯನ್ನು ಮರಳಿ ಸಮೀಪ ಹೆಬ್ಬಾಳದ ಬೋಳಾಡಿ ಬಸವೇಶ್ವರ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ತಮ್ಮ ಮಠಕ್ಕೆ ಕರೆಯಿಸಿಕೊಂಡು ಗೌರವಿಸಿದರು.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಿಂದ ಅದೇ ಗ್ರಾಮದ ಅರಣ್ಯಗಿರಿ ಎಂಬ 51 ವರ್ಷದ ವ್ಯಕ್ತಿ ಕಾಲ್ನಡಿಗೆ ಮೂಲಕ ಪುರಿಯ ಜಗನ್ನಾಥನ ದೇಗುಲಕ್ಕೆ ಹೊರಟು ನಿಂತ ಮಾಹಿತಿ ತಿಳಿದ ಸ್ವಾಮೀಜಿ, ಹೆಬ್ಬಾಳದಲ್ಲಿರುವ ತಮ್ಮ ಮಠಕ್ಕೆ ವ್ಯಕ್ತಿಯನ್ನು ಆಹ್ವಾನಿಸಿದರು.
ಬಳಿಕ ಆತನಿಗೆ ಶಾಲು ಹೊದಿಸಿ, ರುದ್ರಾಕ್ಷಿ ಹಾಗೂ ಅಗತ್ಯ ವಸ್ತುಗಳನ್ನು ನೀಡಿ ಗೌರವಿಸಿ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು. ಗದಗದಿಂದ ಗಂಗಾವತಿಗೆ ಬರಲು ಒಂದು ವಾರದ ಸಮಯ ಹಿಡಿದಿದ್ದು, ಆಗಸ್ಟ್ ಕೊನೇಯ ವಾರಕ್ಕೆ ಪುರಿ ದೇಗುಲ ತಲುಪುವುದಾಗಿ ಅರಣ್ಯಗಿರಿ ಈ ಸಂದರ್ಭದಲ್ಲಿ ಹೇಳಿದರು.