ಕುಷ್ಟಗಿ(ಕೊಪ್ಪಳ) : ಮಲೆನಾಡಿನಲ್ಲಿ ಬೆಳೆಯುವ ಘಮ ಘಮಿಸುವ ತನ್ನದೇ ಸ್ವಾದಿಷ್ಟ ರುಚಿಯ ಹಲಸು ಇದೀಗ ಬಯಲು ಸೀಮೆಯ ಕುಷ್ಟಗಿಯಲ್ಲಿ ಮಾರಾಟವಾಗುತ್ತಿದೆ. ಪ್ರತಿ ವರ್ಷದ ಸೀಜನ್ನಲ್ಲಿ ಸ್ಥಳೀಯ ಹಣ್ಣಿನ ವ್ಯಾಪಾರಿಗಳು ತಮಗೆ ಅಗತ್ಯವಿರುವಷ್ಟು ಖರೀದಿಸಿ, ಹಲಸಿನ ಹಣ್ಣಿನ ತೊಳೆಗಳನ್ನು ಬಿಡಿಸಿ ಗಾಜಿನ ಭರಣಿಯಲ್ಲಿ ಬಿಡಿ ಬಿಡಿಯಾಗಿ ಮಾರಾಟ ಮಾಡುತ್ತಿದ್ದಾರೆ.
ಆದರೀಗ ಇಡೀ ಹಲಸಿನ ಹಣ್ಣುಗಳು ಮಾರಾಟಕ್ಕೆ ಬಂದಿರುವುದು ಹಲಸು ಪ್ರಿಯರನ್ನು ಸಂಪ್ರೀತಗೊಳಿಸಿದೆ. ಈ ಇವುಗಳ ರುಚಿ ಕಂಡವರು 100 ರೂ. ಕೊಟ್ಟು ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡು ಬಂತು.
ಮಲೆನಾಡಿನಲ್ಲಿ ಈ ಭಾರಿ ಭರ್ಜರಿ ಬೆಳೆ ಬಂದಿದೆ. ಲಾಕ್‌ಡೌನ್ ಎಫೆಕ್ಟ್‌ನಿಂದ ಸಾಗಾಣಿಕೆಗೆ ಹೆಚ್ಚುವರಿ ಖರ್ಚಾಗುತ್ತಿದೆ. ಇದನ್ನ ಬೆಳೆಯುವ ಪ್ರದೇಶದಲ್ಲಿ ಈ ಹಲಸಿನ ಹಣ್ಣಿಗೆ ಸಾಮಾನ್ಯವಾಗಿ ಬೇಡಿಕೆ ಕಡಿಮೆ. ಈ ಭಾಗದ ಹಲಸು ಪ್ರಿಯರಿಗೆ ರುಚಿಸಲಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ತಂದು ಮಾರಲಾಗುತ್ತಿದೆ ಅಂತಾರೆ ಶಿವಮೊಗ್ಗ ಮೂಲದ ಹಲಸಿನ ಹಣ್ಣಿನ ವ್ಯಾಪಾರಿ ಸುಭಾಸ್ ಅವರು.