ETV Bharat / state

ಬೆಲೆ ಇಲ್ಲದೆ ಬಾಡಿ ಹೋಗುತ್ತಿದ್ದಾನೆ ವೀಳ್ಯದೆಲೆ ರೈತ

author img

By

Published : Jun 9, 2021, 11:59 AM IST

ಕೊರೊನಾ ಲಾಕ್​ಡೌನ್​ ಪರಿಣಾಮ ಸೊಂಪಾಗಿ ಬೆಳೆದ ವೀಳ್ಯದೆಲೆಗಳು ಮಾರಾಟವಾಗದೆ ಬಳ್ಳಿಯಲ್ಲೇ ಬಾಡಿ ಹೋಗುತ್ತಿದೆ. ಮಾರುಕಟ್ಟೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

betel leaves
ವೀಳ್ಯದೆಲೆ

ಕೊಪ್ಪಳ: ವೀಳ್ಯದೆಲೆಗೆ ನಮ್ಮಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ. ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮದಿಂದ ವೀಳ್ಯದೆಲೆ ಬೆಳೆದ ರೈತನಿಗೆ ಸ್ಥಾನವಿಲ್ಲದಂತಾಗಿದೆ. ಬೆಳೆದ ವೀಳ್ಯದೆಲೆಗೆ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೆ ರೈತರು ಬಾಡಿ ಹೋಗಿದ್ದಾರೆ.

ವೀಳ್ಯದೆಲೆ ಬೆಳೆದ ರೈತ

ಹೌದು, ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮ ಎಲ್ಲ ವರ್ಗದ ಜನರ ಹಾಗೂ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಕರಿನೆರಳು ಬೀರಿದೆ. ಇದರಿಂದಾಗಿ ಅನೇಕರ ಬದುಕು ತುಂಬಾ ದುಸ್ತರವಾಗಿ ಪರಿಣಮಿಸಿದೆ. ಅದರಲ್ಲಿ ತೋಟಗಾರಿಕೆ ಬೆಳೆಗಳ ವ್ಯಾಪ್ತಿಯಲ್ಲಿ ಬರುವ ವೀಳ್ಯಕ್ಕೆ ಬೆಲೆ ಇಲ್ಲದೆ ಬಾಡಿ ಹೋಗುತ್ತಿವೆ.

ಕೊಪ್ಪಳ ಜಿಲ್ಲೆಯ ಡಂಬ್ರಳ್ಳಿ, ಬೇಳೂರು, ಮಡಿಕೇರಿ, ಯರಗೇರಾ, ಹನುಮಸಾಗರ ಸೇರಿದಂತೆ ವಿವಿಧೆಡೆ ಕರಿಎಲೆ ಹಾಗೂ ಅಂಬಾಡಿ ಎಲೆಯನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 50 ಹೆಕ್ಟರ್ ಪ್ರದೇಶ ಅಂದರೆ 125 ಎಕರೆ ಪ್ರದೇಶದಲ್ಲಿ ವೀಳ್ಯೆದೆಲೆಯನ್ನು ಬೆಳೆಯಲಾಗುತ್ತಿದೆ. ಎಲ್ಲವೂ ಸರಿ ಇದ್ದಿದ್ದರೆ ವೀಳ್ಯದೆಲೆ ಉತ್ತಮ ಆದಾಯ ತರುತ್ತಿತ್ತು. ಆದರೆ ಕಳೆದ ವರ್ಷದಿಂದ ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ಪರಿಣಾಮದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯವಾಗಿರುವ ವೀಳ್ಯದೆಲೆ ಬೇಡಿಕೆ ಕಳೆದುಕೊಂಡಿದೆ.

ಕಳೆದ ವರ್ಷ ಹಾಗೂ ಈ ವರ್ಷ ಕೊರೊನಾ ಭೀತಿ ಹಾಗೂ ಲಾಕ್ ಡೌನ್ ಆಗಿದ್ದರಿಂದ ಮದುವೆಗಳು, ಸಭೆ ಸಮಾರಂಭಗಳು, ದೇವಸ್ಥಾನಗಳು, ಪಾನ್ ಶಾಪ್​ಗಳು ಸಹ ಬಂದ್ ಆಗಿವೆ. ಹೀಗಾಗಿ ವೀಳ್ಯದೆಲೆ ಮಾರಾಟ ಮಾಡಲಾಗುತ್ತಿಲ್ಲ. ಇದರಿಂದ ಕಷ್ಟಪಟ್ಟು ಬೆಳೆದ ವೀಳ್ಯದೆಲೆ ಮಾರಾಟವಾಗುತ್ತಿಲ್ಲ. ಇದರಿಂದ ತೋಟದಲ್ಲಿಯೇ ಎಲೆಗಳು ಬಾಡುವಂತಾಗಿದೆ.

ಒಂದು ಎಕರೆಗೆ ಪ್ರತಿ ತಿಂಗಳು 10-15 ಪೆಂಡಿ ವೀಳ್ಯೆದೆಲೆ ಬೆಳೆದು ಮಾರುಕಟ್ಟೆಯಲ್ಲಿ 5-6 ಸಾವಿರ ರೂಪಾಯಿಗೆ ಮಾರಾಟ ಮಾಡಿ ಪ್ರತಿ ತಿಂಗಳು 50 ಸಾವಿರ ರೂಪಾಯಿಯಷ್ಟು ಆದಾಯ ಬರುತ್ತಿತ್ತು. ಈಗ ಮಾರುಕಟ್ಟೆಗೆ ಹೋದರೆ ಬಹಳಷ್ಟು ಕಡಿಮೆ ಬೆಲೆಯಲ್ಲಿ ಕೇಳುತ್ತಾರೆ. ಕೇವಲ 1000-2000 ರೂಪಾಯಿಗೆ ಒಂದು ಪೆಂಡಿ ಎಲೆಯನ್ನು ಕೇಳುತ್ತಿದ್ದಾರೆ. ವೀಳ್ಯೆದೆಲೆ ಕಟಾವು ಮಾಡಲು ಕಾರ್ಮಿಕರಿಗೆ ಈ ಹಣ ಸಾಲುತ್ತಿಲ್ಲ. ಹೀಗಾಗಿ ಈ ವರ್ಷವೂ ವೀಳ್ಯದೆಲೆ ಬೆಳೆದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ಸಮೀಕ್ಷೆ ನಡೆಸಿ ನಮಗೂ ಪರಿಹಾರ ನೀಡಬೇಕು ಎಂದು ವೀಳ್ಯದೆಲೆ ಬೆಳೆದ ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: 4.9 ಸೆಕೆಂಡ್​ಗೆ 100 ಕಿ.ಮೀ. ವೇಗದ ಬೆಂಜ್​ ಕಾರು ಲಗ್ಗೆ: ಬೆಲೆ ಎಷ್ಟು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.