ETV Bharat / state

ಕುಷ್ಟಗಿ: ಬೈಕ್ ಮೇಲೆ ಹರಿದ ಲಾರಿ, ಪ್ರತಿಭಾನ್ವಿತ ವಿದ್ಯಾರ್ಥಿ ಸಾವು.. - ಕುಷ್ಟಗಿಯ ಬಸವರಾಜ್ ಸಂಗಪ್ಪ ಬೆಲ್ಲದ್

ಬಸವರಾಜ ಬೆಲ್ಲದ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತನ್ನ ಮಿತ್ರನನ್ನು ಕಾಣಲು ಬಿಜಕಲ್​​ಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಬೈಕ್ ಮೇಲೆ ಹರಿದಿದ್ದು, ಬಸವರಾಜ್ ಬೆಲ್ಲದ ಸ್ಥಳದಲ್ಲೇ ಮೃತನಾಗಿದ್ದಾನೆ.

lorry-and-bike-accident-student-death-kustagi-news
ಬೈಕ್ ಮೇಲೆ ಹರಿದ ಲಾರಿ, ಪ್ರತಿಭಾನ್ವಿತ ವಿದ್ಯಾರ್ಥಿ ಸಾವು
author img

By

Published : Jan 21, 2021, 9:34 PM IST

Updated : Jan 21, 2021, 10:56 PM IST

ಕುಷ್ಟಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಮೇಲೆ ಲಾರಿ ಹರಿದು ಪ್ರತಿಭಾನ್ವಿತ ವಿದ್ಯಾರ್ಥಿ ದುರ್ಮರಣಕ್ಕೀಡಾದ ಘಟನೆ ಗುರುವಾರ ಸಂಜೆ ನಡೆದಿದೆ.

ಓದಿ: ದರೋಡೆ, ಸುಲಿಗೆಯ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದ 7 ಆರೋಪಿಗಳ ಬಂಧನ

ಕುಷ್ಟಗಿಯ ಬಸವರಾಜ್ ಸಂಗಪ್ಪ ಬೆಲ್ಲದ (20) ಮೃತಪಟ್ಟ ವಿದ್ಯಾರ್ಥಿ. ಬಸವರಾಜ್ ಬೆಲ್ಲದ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತನ್ನ ಮಿತ್ರನನ್ನು ಕಾಣಲು ಬಿಜಕಲ್​​ಗೆ ಬೈಕ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಲಾರಿ ಬೈಕ್ ಮೇಲೆ ಹರಿದಿದ್ದು, ಸ್ಥಳದಲ್ಲೇ‌ ಮೃತನಾಗಿದ್ದಾನೆ.

2015-2016ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98 ಅಂಕಗಳಿಂದ ಕೊಪ್ಪಳ ಜಿಲ್ಲೆಗೆ ಟಾಪರ್ ಆಗಿದ್ದ. ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಇತ್ತೀಚೆಗೆ ಬಿಎಸ್ಸಿ ಪ್ರವೇಶ ಪಡೆದಿದ್ದ ಎನ್ನಲಾಗಿದೆ. ಸಂಗಪ್ಪ ಬೆಲ್ಲದ ಶಿಕ್ಷಕ ದಂಪತಿಯ ಪುತ್ರರಾಗಿರುವ ಬಸವರಾಜನ ಅಕಾಲಿಕ ಸಾವು ಕುಟುಂಬ ವರ್ಗವನ್ನು ಆಘಾತಕ್ಕೆ ನೂಕಿದೆ.

ಈ ಸಂಬಂಧ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 21, 2021, 10:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.