ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿದ್ದು, 3ನೇ ದಿನವಾದ ಇಂದು ಅನಗತ್ಯವಾಗಿ ಓಡಾಡುವ ಜನರನ್ನು ತಡೆಯುವ ಪೊಲೀಸರು ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ.
ನಗರದ ಗಂಜ್ ಸರ್ಕಲ್ ಬಳಿ ನಾಯಿಯೊಂದಿಗೆ ವಾಕಿಂಗ್ ಬಂದಿದ್ದ ತಂದೆ, ಮಗಳನ್ನು ತಡೆದ ಪೊಲೀಸರು ಲಾಕ್‌ಡೌನ್ ಇರುವುದು ಗೊತ್ತಿಲ್ವಾ?, ಹೀಗೆ ಹೊರಗಡೆ ಓಡಾಡುವುದರಿಂದ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಯಾಕೆ ಹೊರಗಡೆ ಬಂದಿದ್ದೀರಿ ಎಂದರು. ಬಳಿಕ ನಾಯಿಯೊಂದಿಗೆ ತಂದೆ, ಮಗಳು ವಾಪಸ್ ಮನೆಗೆ ವಾಪಸ್ಸಾದರು.
ವಾಹನಗಳ ಜಪ್ತಿ:
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿ ಅನೇಕರಿಗೆ ದಂಡ ವಿಧಿಸಲಾಗಿದೆ. 239 ವಾಹನಗಳ ಸೀಜ್ ಮಾಡಿರುವ ಪೊಲೀಸರು ಮೋಟಾರು ವಾಹನ ಕಾಯ್ದೆ ಪ್ರಕಾರ 195 ಪ್ರಕರಣಗಳು, ವಿಪತ್ತು ನಿರ್ವಹಣೆ ಕಾಯ್ದೆ ಅಡಿ 1 ಹಾಗೂ ಮಾಸ್ಕ್ ಹಾಕದ 223 ಪ್ರಕರಣಗಳು ದಾಖಲಿಸಿದ್ದಾರೆ.
ಇದನ್ನೂ ಓದಿ: ಲಾಕ್‌ಡೌನ್ ಎಫೆಕ್ಟ್: ಸಿಲಿಕಾನ್ ಸಿಟಿಯಲ್ಲಿ ಶೇ. 65ರಷ್ಟು ಮಾಲಿನ್ಯ ಪ್ರಮಾಣ ಇಳಿಕೆ