ETV Bharat / state

ಲಾಕ್​ಡೌನ್​ ಎಫೆಕ್ಟ್: ಗಂಡ-ಮಗಳನ್ನು ತಲುಪಲಾಗದೇ ಪರಿತಪಿಸುತ್ತಿರುವ ಮಹಿಳೆ

ಸಂಬಂಧಿಕರೊಬ್ಬರ ಮದುವೆಗೆ ಬಂದಿದ್ದ ಮಹಿಳೆಯೊಬ್ಬರು ತನ್ನ ಏಳು ವರ್ಷದ ಮಗನೊಂದಿಗೆ ಲೌಕ್​ಡೌನ್​ನಲ್ಲಿ ಸಿಲುಕಿ ಗಂಡನ ಮನೆ ಸೇರದೇ ಪರದಾಡುತ್ತಿರುವ ಘಟನೆ ಗಂಗಾವತಿಯಲ್ಲಿ ಬೆಳಕಿಗೆ ಬಂದಿದೆ.

dwd
ಲಾಕ್​ಡೌನ್​ ಎಫೆಕ್ಟ್:ಗಂಡನನ್ನು ಸೇರದೆ ಪರಿತಪಿಸುತ್ತಿರುವ ಮಹಿಳೆಯಿಂದ ಸಹಾಯಕ್ಕೆ ಮೊರೆ
author img

By

Published : Apr 28, 2020, 4:55 PM IST

ಗಂಗಾವತಿ: ಸಂಬಂಧಿಕರೊಬ್ಬರ ಮದುವೆಗೆ ಆಗಮಿಸಿದ್ದ ಮಹಿಳೆಯೊಬ್ಬರು ತನ್ನ ಏಳು ವರ್ಷದ ಮಗನೊಂದಿಗೆ ಲೌಕ್​ಡೌನ್​ನಲ್ಲಿ ಸಿಲುಕಿ ಗಂಡನ ಮನೆ ಸೇರದೇ ಪರದಾಡುತ್ತಿದ್ದಾರೆ. ನಗರದ 24ನೇ ವಾರ್ಡ್​ನ ಮುರಾರಿ ನಗರದಲ್ಲಿ ಸಿಲುಕಿರುವ ಮಹಿಳೆ ತನ್ನ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

ಲಾಕ್​ಡೌನ್​ ಎಫೆಕ್ಟ್: ಗಂಡನನ್ನು ಸೇರದೆ ಪರಿತಪಿಸುತ್ತಿರುವ ಮಹಿಳೆಯಿಂದ ಸಹಾಯಕ್ಕೆ ಮೊರೆ

ಕಳೆದ ಒಂದೂವರೆ ತಿಂಗಳಿಂದ ತವರು ಮನೆಯಲ್ಲಿರುವ ಮಹಿಳೆ, ಕಾರವಾರ ಜಿಲ್ಲೆಯ ಹಳಿಯಾಳದಲ್ಲಿರುವ ಗಂಡ ನಾರಾಯಣ ಅವರ ಮನೆಗೆ ಹೋಗಬೇಕು ಎಂದು ಸಾಕಷ್ಟು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗದ್ದರಿಂದ ಇದೀಗ ಸಹಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಹಳಿಯಾಳದಲ್ಲಿ ಹತ್ತು ವರ್ಷದ ಮಗಳು ಸಂಜನಾ ಹಾಗೂ ಪತಿ ನಾರಾಯಣಗೆ ಸಮಸ್ಯೆಯಾಗಿದೆ. ಅಲ್ಲದೇ ಅತ್ತೆ ಸುಮಿತ್ರಾಗೆ ಆರೋಗ್ಯ ಸಮಸ್ಯೆ ಇದೆ. ಅವರನ್ನು ಆರೈಕೆ ಮಾಡಲು ಹಾಗೂ ನೋಡಿಕೊಳ್ಳಲು ಯಾರೂ ಇಲ್ಲ. ದಯವಿಟ್ಟು ಗಂಡನ ಮನೆಗೆ ಹೋಗಲು ಸಹಾಯ ಮಾಡಿ ಜಿಲ್ಲಾಡಳಿತಕ್ಕೆ ಅನುರಾಧ ಹಳಿಯಾಳ ಮೊರೆ ಇಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.