ಗಂಗಾವತಿ: ನಾಯಿಯನ್ನು ಬೇಟೆಯಾಡಿ ಬಾಯಿಯಲ್ಲಿ ಕಚ್ಚಿಕೊಂಡು ಹೊರಟಿದ್ದ ಚಿರತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಹೇಮಗುಡ್ಡದ ಬಳಿ ನಸುಕಿನ ಜಾವ ಸಂಭವಿಸಿದೆ.
ಕೊಪ್ಪಳದ ಗಂಗಾವತಿ ಮುಖ್ಯರಸ್ತೆಯ ಹೇಮಗುಡ್ಡ ಗ್ರಾಮದ ತಿರುವಿನಲ್ಲಿ ಈ ಘಟನೆ ನಡೆದಿದ್ದು, ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ ಸಾವಿಗೀಡಾಗಿದೆ. ಬೆಳಗ್ಗೆ ಬಹಿರ್ದೆಸೆಗೆ ತೆರಳುತ್ತಿದ್ದ ಯುವಕರು ಚಿರತೆಯ ಕಳೇಬರವನ್ನು ಗಮನಿಸಿ ಡಿಆರ್‌ಎಫ್‌ಒ ರಾಮಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿ ಚಿರತೆಯ ಮೃತದೇಹವನ್ನು ಪರಿಶೀಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗುವುದು ಎಂದು ತಿಳಿಸಿದರು.