ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಚಿರತೆಗಳ ಉಪಟಳ ಮುಂದುವರೆದಿದೆ. ನಿನ್ನೆ ಸಂಜೆ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಏಳು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಚಿರತೆಯ ಬಾಯಿಂದ ಬಾಲಕ ಬದುಕುಳಿದಿದ್ದಾನೆ.
ಕುರಿ ಹಟ್ಟಿಯಲ್ಲಿದ್ದ ಏಳು ವರ್ಷದ ಬಾಲಕ ಅನಿಲ್ ಎಂಬಾತ ಗಾಯಗೊಂಡಿದ್ದಾನೆ. ಇದನ್ನು ಕಂಡು ಅಲ್ಲಿದ್ದವರು ಕೂಗಾಡಿದ್ದರಿಂದ ಬಾಲಕನ್ನು ಬಿಟ್ಟು ಚಿರತೆ ಓಡಿ ಹೋಗಿದೆ. ಚಿರತೆ ದಾಳಿಯಿಂದ ಗಾಯಗೊಂಡಿರುವ ಬಾಲಕನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಓದಿ:ಮೋಜು ಮಾಡಲು ಮಾತೆಯನ್ನೇ ಕಳ್ಳಿ ಮಾಡ್ಬಿಟ್ಟ.. ₹1.31 ಕೋಟಿ ಆಭರಣ ಕದ್ದು ಸಿಕ್ಕಿಬಿದ್ದ ತಾಯಿ-ಮಗ..