ETV Bharat / state

ತಾಲೂಕು ಹಂತದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಉದರದರ್ಶಕ ಚಿಕಿತ್ಸೆ ಯಶಸ್ವಿ

ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಚಿಕಿತ್ಸೆ ಮೂಲಕ 50ಕ್ಕೂ ಹೆಚ್ಚು ಜನರಿಗೆ ಗರ್ಭಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

author img

By

Published : Jun 16, 2023, 9:36 AM IST

ಗರ್ಭಶಸ್ತ್ರ ಚಿಕಿತ್ಸೆ
ಗರ್ಭಶಸ್ತ್ರ ಚಿಕಿತ್ಸೆ

ಗಂಗಾವತಿ: ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆನೆಗೊಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಉದರ ದರ್ಶಕದಿಂದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ವೈದ್ಯರ ತಂಡ, ಗರ್ಭಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅದರಲ್ಲೂ ತಾಲೂಕು ಹಂತದ ಆಸ್ಪತ್ರೆಗಳಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ, ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ಹಾಗೂ ಅರವಳಿಕೆ ತಜ್ಞ ಆರಾಧ್ಯ, ವೈದ್ಯ ಸಿಬ್ಬಂದಿಗಳಾದ ದಿವ್ಯಾ ಸೇರಿದಂತೆ ಎಂಬಿಬಿಎಸ್ ವೈದ್ಯಕೀಯ ತರಬೇತಿ ವಿದ್ಯಾರ್ಥಿಗಳು ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಶಸ್ತ್ರಚಿಕಿತ್ಸೆ: ಕುಟುಂಬ ಕಲ್ಯಾಣ ಯೋಜನೆಯಡಿ ನಿರ್ವಹಿಸಲಾಗುವ ಸಂತಾನ ನಿಯಂತ್ರಣ ಚಿಕಿತ್ಸೆಯಲ್ಲಿ ಈ ಮೊದಲು ಮಹಿಳೆಯ ಹೊಟ್ಟೆಯ ಭಾಗದಲ್ಲಿ ಕತ್ತರಿಯಿಂದ ಕುಯ್ದು ಗರ್ಭಚೀಲ ಹೊರಕ್ಕೆ ತೆಗೆಯಲಾಗುತಿತ್ತು. ಹೀಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಗೆ ಕನಿಷ್ಠ ಮೂರು ದಿನದಿಂದ ಐದು ದಿನದವರೆಗೆ ಬೆಡ್​ರೆಸ್ಟ್​ ನೀಡಲಾಗುತಿತ್ತು. ಅಲ್ಲದೇ ಶಸ್ತ್ರಚಿಕಿತ್ಸೆಯಿಂದ ಮಹಿಳೆಯರಿಗೆ ಸಹಿಸಲಾಗದ ನೋವು ಉಂಟಾಗುತಿತ್ತು.

ಆದರೆ, ಈ ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಶಸ್ತ್ರಚಿಕಿತ್ಸೆಯಿಂದ ಅತ್ಯಂತ ಸುಲಭವಾಗಿ ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಮಹಿಳೆಗೆ ಯಾವುದೇ ನೋವು ಇಲ್ಲದೇ ಸರಳವಾಗಿ ಗರ್ಭಚೀಲವನ್ನು ತೆಗೆಯಬಹುದಾಗಿದೆ. ಹೊಟ್ಟೆಯ ಭಾಗದಲ್ಲಿ ಸಣ್ಣ ಪ್ರಮಾಣ ರಂಧ್ರಗಳನ್ನು ಹಾಕಿ ಮ್ರೈಕ್ರೋಸ್ಕೋಪ್ (ಉದರ ದರ್ಶಕ) ಮೂಲಕ ವೀಕ್ಷಣೆ ಮಾಡುತ್ತಾ ಗರ್ಭಚೀಲ ತೆಗೆಯಬಹುದು. ಇದು ನೋವು ಮತ್ತು ಶಸ್ತ್ರ ರಹಿತ ಚಿಕಿತ್ಸೆ ಎಂದು ವೈದ್ಯಾಧಿಕಾರಿ ಈಶ್ವರ ಸವುಡಿ ತಿಳಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆಯ ತರಬೇತಿ ಪಡೆಯಲು ಎರಡು ವಾರಕಾಲ ದೆಹಲಿಗೆ ತೆರಳಲಾಗಿತ್ತು. ಅಲ್ಲಿ ಕೇಂದ್ರ ಸರ್ಕಾರ ಮತ್ತು ಆರೋಗ್ಯ ಇಲಾಖೆಯಿಂದ ತರಬೇತಿ ನೀಡಲಾಗಿತ್ತು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಂಗಾವತಿಯಂಥ ತಾಲೂಕು ಹಂತದ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸತತ ಮೂರು ಬಾರಿ ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡ ರಾಜ್ಯದ ಏಕೈಕ ತಾಲೂಕು ಆಸ್ಪತ್ರೆ ಎಂದು ದಾಖಲೆ ನಿರ್ಮಾಣ ಮಾಡಿರುವ ಇಲ್ಲಿನ ಉಪ ವಿಭಾಗ ಆಸ್ಪತ್ರೆ ಹಲವು ದಾಖಲೆಗಳಿಂದ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.

ರಾಜ್ಯದಲ್ಲಿ ಅತಿಹೆಚ್ಚು ಹೆರಿಗೆ ಅದರಲ್ಲೂ ಅತಿಹೆಚ್ಚು ಸಹಜ ಹೆರಿಗೆ ಮಾಡಿಸುವ, ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಕಾರ್ಪೊರೇಟ್​ ಮಾದರಿಯ ಉಚಿತ ಸೇವೆ ನೀಡುವಂತ ಸೌಲಭ್ಯದಿಂದ ಗಮನ ಸೆಳೆಯುತ್ತಿರುವ ಗಂಗಾವತಿ ಆಸ್ಪತ್ರೆ ಇದೀಗ ಲ್ಯಾಪ್ರೊಸ್ಕೋಪಿ ಹಿಸ್ಟ್ರೋಕ್ಟಮಿ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

ಇದನ್ನೂ ಓದಿ: ಹಾವೇರಿ ಜಿಲ್ಲಾಸ್ಪತ್ರೆಗೆ ಪ್ರಶಸ್ತಿಯ ಗರಿ: ಗುಣಮಟ್ಟದ ಸೇವೆಯಿಂದ ರಾಷ್ಟ್ರಮಟ್ಟದ ಲಕ್ಷ್ಯ ಪ್ರಶಸ್ತಿಗೆ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.