ಗಂಗಾವತಿ: ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯ ಎಚ್ಚರಿಕೆ ಮಧ್ಯೆಯೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ಬಗ್ಗೆ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸ್ತಿದ್ದಂತೆಯೇ ರೋಗಿಗಳು ಪಾಠ ಕಲಿತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಚಿಕಿತ್ಸೆಗೆ ಆಗಮಿಸಿದ್ದಲ್ಲಿ ದಂಡ ಹಾಕುವುದಾಗಿ ಪೊಲೀಸರು ಎಚ್ಚರಿಕೆ ರವಾನಿಸಿದ ಹಿನ್ನೆಲೆ ಅನಿವಾರ್ಯವಾಗಿ ರೋಗಿಗಳು ಒಂದು ಮೀಟರ್ ದೂರ ನಿಂತು ಚಿಕಿತ್ಸೆ ಪಡೆದರು.
ಸ್ವತಃ ನಗರ ಠಾಣೆಯ ಪಿಐ ವೆಂಕಟಸ್ವಾಮಿ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಇದ್ದು ಖುದ್ದು ವೀಕ್ಷಣೆ ನಡೆಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಯಮ ಮೀರುವ ರೋಗಿಗಳಿಗೆ ಎಚ್ಚರಿಕೆ ರವಾನಿಸಿದರು.
ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಯ ಎಚ್ಚರಿಕೆ ಮಧ್ಯೆಯೂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಪೊಲೀಸರು ರಂಗ ಪ್ರವೇಶಿಸಿದ ಬಳಿಕ ಈಗ ರೋಗಿಗಳು ಪಾಠ ಕಲಿತಿದ್ದಾರೆ.