ಕೊಪ್ಪಳ : ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ವ್ಯಾಪಕವಾಗಿದೆ. ಜನರು ವಿವಿಧ ಔಷಧಿಗಳ ಮೊರೆ ಹೋಗುತ್ತಿದ್ದಾರೆ.
ಯಾವುದಕ್ಕೂ ಮನೆಯಲ್ಲಿ ಇರಲಿ ಎಂದು ಕೆಲ ಮಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗಾಗಿ, ಆ ಔಷಧಿ, ಮಾತ್ರೆಗಳ ಕೊರತೆ ಎದುರಾಗುತ್ತಿದೆ ಎಂದು ಮೆಡಿಕಲ್ ಶಾಪ್ ಮಾಲೀಕರು ಹೇಳಿದ್ದಾರೆ.
ಕೊರೊನೊ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ನೆಗಡಿ, ಕೆಮ್ಮು, ಜ್ವರದ ಮಾತ್ರೆಗಳನ್ನು ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸುತ್ತಿದ್ದಾರೆ.
ನೆಗಡಿ, ಕೆಮ್ಮು, ಜ್ವರ ಬಂದರೆ ಕೊಡುವ ಮಾತ್ರೆಗಳನ್ನು ಜನರು ತೆಗೆದುಕೊಂಡು ಮನೆಯಲ್ಲಿಟ್ಟು ಕೊಳ್ಳುತ್ತಿದ್ದಾರೆ. ಹೀಗಾಗಿ, ಜ್ವರದ ಮಾತ್ರೆ ಸೇರಿದಂತೆ ಕೆಲ ಮಾತ್ರೆಗಳ ಕೊರತೆ ಎದುರಾಗಿದೆ.