ETV Bharat / state

ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆ ಕೊರತೆ.. ಬೇಕಿದೆ ಸ್ವಚ್ಛತಾ ಸಿಬ್ಬಂದಿ, ಅನುದಾನ - Schools open during corona periods

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಹಳಷ್ಟು ಕಡೆ ಸ್ವಚ್ಛತೆಗೆ ಪ್ರತ್ಯೇಕ ಸಿಬ್ಬಂದಿಯಿಲ್ಲ. ಇದರಿಂದಾಗಿ ಬಹುತೇಕ ಶಾಲೆಗಳ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ..

Toilets
ಶೌಚಾಲಯ
author img

By

Published : Jan 18, 2021, 4:21 PM IST

ಕೊಪ್ಪಳ : ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆ ಅಷ್ಟಕಷ್ಟೇ.. ಅದರ ನಿರ್ವಹಣೆಗೆಂದು ಪ್ರತ್ಯೇಕ ಸಿಬ್ಬಂದಿಯಿಲ್ಲ. ಹೀಗಾಗಿ, ಸರ್ಕಾರಿ ಶಾಲೆಯ ಶೌಚಾಲಯಗಳ ಸ್ವಚ್ಛತೆ ಕೆಲವೆಡೆ ಶಿಕ್ಷಕರೇ ಮಾಡುತ್ತಿದ್ದಾರೆ. ಇತ್ತ ಸರಿಯಾಗಿ ಅನುದಾನವೂ ಬಿಡುಗಡೆಯಾಗುತ್ತಿಲ್ಲ, ಮತ್ತೊಂದೆಡೆ ಸ್ವಚ್ಛತಾ ಸಿಬ್ಬಂದಿಯನ್ನೂ ನೇಮಿಸಿಲ್ಲ.

ಕೊರೊನಾ ಸೋಂಕು‌ ಭೀತಿ ನಡುವೆಯೇ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಹೀಗಾಗಿ, ಈ ಸಮಯದಲ್ಲಿ ಶಾಲಾ-ಕಾಲೇಜುಗಳ ಪರಿಸರ ಸ್ವಚ್ಛತೆ ಅತೀ ಮುಖ್ಯವಾಗಿದೆ. ಆದರೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಹಳಷ್ಟು ಕಡೆ ಸ್ವಚ್ಛತೆಗೆ ಪ್ರತ್ಯೇಕ ಸಿಬ್ಬಂದಿಯಿಲ್ಲ. ಇದರಿಂದಾಗಿ ಬಹುತೇಕ ಶಾಲೆಗಳ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ.

ಸರ್ಕಾರಿ ಶಾಲೆಗಳ ಶೌಚಾಲಯಗಳ ನಿರ್ವಹಣೆ ಕೊರತೆ

ಇದನ್ನೂ ಓದಿ..."ರಾಜ್ಯಕ್ಕೆ ಉದ್ಧವ್​ ಠಾಕ್ರೆ ಬಂದ್ರೆ ನೋಡ್ಕೊಳ್ತೀವಿ": ಚಾ.ರಂ. ಶ್ರೀನಿವಾಸಗೌಡ ಎಚ್ಚರಿಕೆ

ಅನುದಾನಿತ 32 ಪ್ರಾಥಮಿಕ ಶಾಲೆ ಸೇರಿ ಜಿಲ್ಲೆಯಲ್ಲಿ ಒಟ್ಟು 990 ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಅನುದಾನಿತ 32 ಪ್ರೌಢಶಾಲೆಗಳು ಸೇರಿ ಒಟ್ಟು 198 ಸರ್ಕಾರಿ ಪ್ರೌಢ ಶಾಲೆಗಳಿವೆ. ಕೆಲವೆಡೆ ಶಿಕ್ಷಕರೇ ಸ್ವಚ್ಛತೆ ಮಾಡಿದ್ರೆ, ಇನ್ನೂ ಕೆಲವೆಡೆ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಕರೆತರಲಾಗುತ್ತದೆ ಎನ್ನುತ್ತಾರೆ ಶಿಕ್ಷಕರು.

ಪ್ರಾಥಮಿಕ ಶಾಲೆಗಳ ಶೌಚಾಲಯ ನಿರ್ವಹಣೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆಯಿಂದ ₹1,500 ಹಾಗೂ ಹೈಸ್ಕೂಲ್​​ಗಳಿಗೆ ₹2,500 ಹಣ ಬಿಡುಗಡೆಯಾಗುತ್ತದೆ. ವಾರದಲ್ಲಿ ಏನಿಲ್ಲವೆಂದರೂ ಎರಡ್ಮೂರು ಬಾರಿ ಶೌಚಾಲಯ ಸ್ವಚ್ಛ ಮಾಡಬೇಕಿದೆ. ಒಂದು ಬಾರಿ ಒಬ್ಬ ಕಾರ್ಮಿಕರಿಗೆ ಕನಿಷ್ಠ ₹200-300 ಕೊಡಬೇಕು.

ಹೀಗಾಗಿ, ಇಲಾಖೆ ನೀಡುವ ಶೌಚಾಲಗಳ ನಿರ್ವಹಣಾ ವೆಚ್ಚ ಯಾತಕ್ಕೂ ಸಾಲುವುದಿಲ್ಲ. ಕೆಲವೊಮ್ಮೆ ಸ್ವಂತ ಖರ್ಚು ಮಾಡುತ್ತೇವೆ ಎನ್ನುತ್ತಾರೆ ಶಿಕ್ಷಕರು. ಹೀಗಾಗಿ, ಶಾಲೆಗಳ ಪರಿಸರ ಹಾಗೂ ಶೌಚಾಲಯಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಯನ್ನಾದ್ರೂ ನೇಮಿಸುವ ಮೂಲಕ ಶಿಕ್ಷಕರ ಈ ಹೊರೆ ಇಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.