ETV Bharat / state

ಆರೋಗ್ಯ ಕಾಪಾಡಬೇಕಾದ ಸರ್ಕಾರಿ ಆಸ್ಪತ್ರೆಗೇ ದೊಡ್ಡರೋಗ.. - ಕೊಪ್ಪಳ ಆಸ್ಪತ್ರೆ ಅಸ್ವಚ್ಛತೆ

ಇಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸೊಳ್ಳೆಗಳ ಕಾಟ ಮತ್ತು ಗಲೀಜು ವಾಸನೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆರೋಗ್ಯ ಕಾಪಾಡಬೇಕಾದ ಕೇಂದ್ರವೇ ಅನಾರೋಗ್ಯ ಕೇಂದ್ರವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.ಇಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸೊಳ್ಳೆಗಳ ಕಾಟ ಮತ್ತು ಗಲೀಜು ವಾಸನೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆರೋಗ್ಯ ಕಾಪಾಡಬೇಕಾದ ಕೇಂದ್ರವೇ ಅನಾರೋಗ್ಯ ಕೇಂದ್ರವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ..

Lack of cleanliness at Koppal Hospital
ಕೊಪ್ಪಳ ಆಸ್ಪತ್ರೆ ಅಸ್ವಚ್ಛತೆ
author img

By

Published : Dec 15, 2021, 2:50 PM IST

ಕೊಪ್ಪಳ : ಕೊಪ್ಪಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ ಬಂದವರ ರೋಗ ವಾಸಿಯಾಗುವ ಬದಲು ಆರೋಗ್ಯವಂತರಿಗೂ ರೋಗ ಹರಡುವ ಸ್ಥಿತಿಯಲ್ಲಿ ಆಸ್ಪತ್ರೆಯಿದೆ.

ಕೊಪ್ಪಳ ಆಸ್ಪತ್ರೆಯಲ್ಲಿ ಸ್ವಚ್ಛತೆ ಎಂಬುದೇ ಇಲ್ಲ..

ಕೊಪ್ಪಳ ನಗರದ ಮಧ್ಯ ಭಾಗದಲ್ಲಿರುವ ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲು ಜಿಲ್ಲಾಸ್ಪತ್ರೆ ಇತ್ತು. ಕಳೆದ ಹತ್ತು ವರ್ಷದ ಹಿಂದೆ ಜಿಲ್ಲಾಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಈ ಸ್ಥಳದಲ್ಲೀಗ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿಗಳ ಕಾರ್ಯಾಲಯ, ಔಷಧಿ ಉಗ್ರಾಣ ಹಾಗೂ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಿದೆ. ಇಷ್ಟೆಲ್ಲ ಕಚೇರಿ, ಕಾರ್ಯಾಲಯಗಳ ಕಟ್ಟಡಗಳು ಈ ಆವರಣದಲ್ಲಿದ್ದರೂ ಸಹ ಸ್ವಚ್ಛತೆ ದೂರದ ಮಾತಾಗಿದೆ.

ಆಸ್ಪತ್ರೆ ಆವರಣದಲ್ಲಿ ಕೊಳಚೆ : ಈ ಆವರಣಕ್ಕೆ‌ ಕಾಲಿಡಲಾಗದಂತೆ ಕೊಳಚೆ ನೀರು ತುಂಬಿಕೊಂಡಿರುತ್ತದೆ. ಸದಾ ನೀರು ನಿಲ್ಲುತ್ತಿರುವುದರಿಂದ ಆಸ್ಪತ್ರೆ ಆವರಣ ಸೊಳ್ಳೆಗಳ ತಾಣವಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗ ಕೊರೊನಾ‌ ಲಸಿಕೆ ಹಾಕಲಾಗುತ್ತಿದೆ.

ಆದ್ರೆ, ಲಸಿಕೆ ಹಾಕಿಸಿಕೊಳ್ಳಲು ಬರುವವರು ಇದೀಗ ಶುಚಿತ್ವ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ಬರಲು ಹಿಂಜರಿಯುವಂತಾಗಿದೆ. ಲಸಿಕೆ‌ ಹಾಕಿಸಿಕೊಳ್ಳಲು ಬಂದ ಬಹುತೇಕರು ವಾಪಸ್​​ ಹೋಗುತ್ತಿದ್ದಾರೆ. ಇಲ್ಲಿ ಮಕ್ಕಳಿಗೂ ವಿವಿಧ ಲಸಿಕೆ ಹಾಕಲಾಗುತ್ತದೆ. ಆದ್ರೀಗ ಪೋಷಕರು ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ.

ಸಾರ್ವಜನಿಕರ ಅಸಮಾಧಾನ : ಇಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸೊಳ್ಳೆಗಳ ಕಾಟ ಮತ್ತು ಗಲೀಜು ವಾಸನೆಯನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಆರೋಗ್ಯ ಕಾಪಾಡಬೇಕಾದ ಕೇಂದ್ರವೇ ಅನಾರೋಗ್ಯ ಕೇಂದ್ರವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ನಮ್ಮನ್ನೆಲ್ಲ ನೆಗ್ಲೆಟ್ ಮಾಡಿರುವುದೇ ಪರಿಷತ್ ಚುನಾವಣೆ ಸೋಲಿಗೆ ಕಾರಣ : ಶಾಸಕ ಯತ್ನಾಳ್

ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಲಿಂಗರಾಜು ಪ್ರತಿಕ್ರಿಯಿಸಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ನಗರಸಭೆಯಿಂದ ನೀರು ಸರಬರಾಜು ಮಾಡುವ ಪೈಪ್​ಗಳಿವೆ. ಹಾಗಾಗಿ, ಇಲ್ಲಿ ನೀರು ನಿಲ್ಲುತ್ತಿದೆ. ಆಗಾಗ ರಿಪೇರಿ ಮಾಡಲಾಗುತ್ತದೆ.

ಈಗ ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸಲು ನೀರಿನ ಸಂಪ್ ಹಾಗೂ ಪೈಪ್​ ಮಾಡಲು ಹೊಸ ಯೋಜನೆ ಸಿದ್ಧಪಡಿಸಲಾಗಿದೆ. ಆದಷ್ಟು ಬೇಗ ಈ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಲಾಗುವುದು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.