ಕುಷ್ಟಗಿ(ಕೊಪ್ಪಳ): ಕುಷ್ಟಗಿ(ಕೊಪ್ಪಳ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯೊಬ್ಬರು ತಾವೇ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ (ಸಿಡಿಪಿಓ) ಅಧಿಕಾರಿಯೆಂದು ಮೋಬೈಲ್ನಲ್ಲಿ ಮಾತನಾಡಿದ ಘಟನೆ ಬೆಳಕಿಗೆ ಬಂದಿದೆ.
ಕುಷ್ಟಗಿ ಪಟ್ಟಣದ 21ನೇ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆ ಪ್ರಕರಣ ಸಂಬಂಧ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸರಸ್ವತಿ ಮಂಗಳೂರು ಎಂಬುವವರು ಸಿಡಿಪಿಓ ಜಯಶ್ರೀ ಅವರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ವಾರ್ಡ್ ಸದಸ್ಯ ಮಹಾಂತೇಶ ಕಲ್ಲಭಾವಿ ಅವರು, ಸಿಡಿಪಿಓ ಇವರಾ? ಅವರಾ? ಎಂದು ಗೊಂದಲಕ್ಕೀಡಾದರು.
ಜಯಶ್ರೀ ಅವರೇ ನಿಜವಾದ ಸಿಡಿಪಿಓ ಎಂಬುದು ಕೆಲ ಹೊತ್ತಿನ ಬಳಿಕ ತಿಳಿದು ಬಂತು. ಸರಸ್ವತಿ ಅವರು ತಾವೇ ಸಿಡಿಪಿಓ ಎಂದು ಮೊಬೈಲ್ನಲ್ಲಿ ಮಾತನಾಡಿದ್ದ ರೆಕಾರ್ಡಿಂಗ್ ಅನ್ನು ಸಾರ್ವಜನಿಕರ ಮದ್ಯೆ ಕೇಳಿಸಿದಾಗ, ಸಿಡಿಪಿಓ ಜಯಶ್ರೀ ಅವರಿಗೆ ಏನೂ ಹೇಳಬೇಕೆನ್ನುವುದು ತಿಳಿಯದೆ ಮುಜುಗುರಕ್ಕೆ ಒಳಗಾದರು.