ETV Bharat / state

ಸಂಪರ್ಕಕ್ಕೆ ಸಿಗದ ಇಬ್ಬರು ಕೈ ಸದಸ್ಯರು: ಬಿಜೆಪಿಗೆ ಕುಷ್ಟಗಿ ಪುರಸಭೆ ಅಧಿಕಾರ? - Kushtagi Congress

ಕುಷ್ಟಗಿ ಪುರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಆನೆ ಬಲ ಬಂದತಾಗಿದೆ. ಕಾಂಗ್ರೆಸ್​ನ ಇಬ್ಬರು ಸದಸ್ಯರು ಸಂಪರ್ಕಕ್ಕೆ ಸಿಗದಿರುವುದು ಕೈ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.​

dsds
ಬಿಜೆಪಿಗೆ ಕುಷ್ಟಗಿ ಪುರಸಭೆ ಅಧಿಕಾರ..?
author img

By

Published : Oct 16, 2020, 8:20 AM IST

ಕುಷ್ಟಗಿ: ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅ. 22ಕ್ಕೆ ನಿಗದಿಯಾಗಿದೆ. ಈ ಗದ್ದುಗೆ ಗುದ್ದಾಟದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಿಬ್ಬರು ಸಂಪರ್ಕಕ್ಕೆ ಸಿಗದಿರುವುದರಿಂದ ಬಿಜೆಪಿ ಅಧಿಕಾರಕ್ಕೇರುವುದು ಖಚಿತ ಎನ್ನಲಾಗುತ್ತಿದೆ.

ಕುಷ್ಟಗಿ ಪುರಸಭೆಯ 23 ವಾರ್ಡ್​ಗಳಿಗೆ ಕಾಂಗ್ರೆಸ್​ 12, ಬಿಜೆಪಿ 8, 2 ಪಕ್ಷೇತರರು, ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ 12 ಜನ ಸದಸ್ಯ ಬಲದಲ್ಲಿ ಮೂರನೇ ವಾರ್ಡ್​ ಸದಸ್ಯೆ ಗೀತಾ ಶರಣಪ್ಪ ತುರಕಾಣಿ ನಾಟ್ ​ರಿಚೇಬಲ್ ಆಗಿದ್ದಾರೆ. 17ನೇ ವಾರ್ಡ್​ ಸದಸ್ಯ ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದೇ ಬಿಂಬಿತರಾಗಿದ್ದ ವೀರೇಶಗೌಡ ಬೆದವಟ್ಟಿ ಸಂಪರ್ಕಕ್ಕೆ ಸಿಗದೆ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆ ಬಿಜೆಪಿ 8 ಜನ, ಮೂವರು ಪಕ್ಷೇತರರು ಸೇರಿದಂತೆ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿಯತ್ತ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು ಸಂಖ್ಯೆಯನ್ನು 13ಕ್ಕೆ ಹೆಚ್ಚಿಸಿಕೊಂಡಿದೆ ಎನ್ನಲಾಗುತ್ತಿದೆ. ಚುನಾವಣೆಯಲ್ಲಿ ಎರಡನೇ ಹೆಚ್ಚು ಸ್ಥಾನ ಗಳಿಸಿದ ಬಿಜೆಪಿಗೆ ಕಾಂಗ್ರೆಸ್​ನ ಇಬ್ಬರು ಸದಸ್ಯರು ಅಡ್ಡ ಮತದಾನ ಇಲ್ಲವೇ ತಟಸ್ಥರಾಗುವ ಸಾಧ್ಯತೆ ವರದಾನವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.