ETV Bharat / state

ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್​ಡೌನ್​ ವಿಚಾರ: ಪುರಸಭೆ ನಿರ್ಣಯಕ್ಕೆ ಶಾಸಕರಿಂದ ಆಕ್ಷೇಪ - ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್​​ಡೌನ್​ ಬೇಡ ಅಂದ ಶಾಸಕ

ಕುಷ್ಟಗಿ ಪಟ್ಟಣದಲ್ಲಿ 300 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಪುರಸಭೆ ಪಟ್ಟಣವನ್ನು ಸಂಪೂರ್ಣ ಸೀಲ್​ಡೌನ್ ಮಾಡುವ​ ನಿರ್ಧಾರಕ್ಕೆ ಬಂದಿದೆ. ಆದರೆ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಸೀಲ್​ಡೌನ್​ ಬೇಡ ಎಂದಿದ್ದಾರೆ.

meeting
meeting
author img

By

Published : May 9, 2021, 5:23 PM IST

Updated : May 9, 2021, 6:55 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದಲ್ಲಿ ಕೊರೊನಾ ಸೋಂಕು 300ಕ್ಕೂ ಹೆಚ್ಚು ಜನರಿಗೆ ತಗುಲಿರುವುದು ದೃಢವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪುರಸಭೆ ಸಂಪೂರ್ಣ ಸೀಲ್​​ಡೌನ್​ ನಿರ್ಧಾರಕ್ಕೆ ಬಂದಿದೆ. ಈ ನಿರ್ಣಯಕ್ಕೆ ದ್ವಂದ್ವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ತಹಶೀಲ್ದಾರ್​ ಎಂ.ಸಿದ್ದೇಶ, ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್​ಐ ತಿಮ್ಮಣ್ಣ ನಾಯಕ್ ಭಾಗವಹಿಸಿದ್ದರು. ಸದರಿ ಸಭೆಯಲ್ಲಿ ಹಾಜರಿದ್ದ ಸದಸ್ಯರು, ಸರ್ಕಾರ ವಿಧಿಸುವ ಮಾರ್ಗಸೂಚಿಯನ್ವಯ ಲಾಕಡೌನ್ ಜಾರಿಯಲ್ಲಿದ್ದು, ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್​ಡೌನ್​​ಗೆ ಸಹಮತ ವ್ಯಕ್ತಪಡಿಸಿದ್ರು. ಆ ಸಂದರ್ಭ ಸೀಲ್​ಡೌನ್​ ಮಾಡಿದರೆ ಜನರಿಗೆ ಕಿರಾಣಿ, ತರಕಾರಿ ಮನೆ ಮನೆಗೆ ತಲುಪಿಸುವುದು, ಹಾಲು, ಶುದ್ಧ ನೀರು, ವೈದ್ಯಕೀಯ ಸೇವೆ ಸಡಿಲಿಕೆ ಹಾಗೂ ಇಡೀ ದಿನ ಪಟ್ಟಣ ಯಾವುದೇ ವಾಣಿಜ್ಯ ವಹಿವಾಟು ಬಂದ್ ಮಾಡುವ ಕುರಿತು ಪ್ರಸ್ತಾಪ ವ್ಯಕ್ತವಾಯಿತು.

ಕುಷ್ಟಗಿ ಪಟ್ಟಣ ಸಂಪೂರ್ಣ ಸೀಲ್​ಡೌನ್​ ವಿಚಾರ: ಪುರಸಭೆ ನಿರ್ಣಯಕ್ಕೆ ಶಾಸಕರಿಂದ ಆಕ್ಷೇಪ

ಇದೇ ವೇಳೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಕುಷ್ಟಗಿ ಪಟ್ಟಣ ಸೀಲ್​ಡೌನ್​ ಬೇಡ, ಸರ್ಕಾರದ ಮಾರ್ಗಸೂಚಿ ಪ್ರಕಾರ ನಡೆಯಲಿ ಎಂದು ಫೋನ್ ಮೂಲಕ ಸಲಹೆ ನೀಡಿದರು. ಆಗ ಸಭೆಯಲ್ಲಿ ದ್ವಂದ್ವ ಅಭಿಪ್ರಾಯ ವ್ಯಕ್ತವಾಯಿತು. ಮೇ 10 ರಂದು ಮತ್ತೆ ಸಭೆ ಕರೆದು ಶಾಸಕ ಬಯ್ಯಾಪೂರ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲು ನಿರ್ಣಯಿಸಲಾಯಿತು.

Last Updated : May 9, 2021, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.