ETV Bharat / state

ಕುಷ್ಟಗಿ: ಕಂಟೈನ್ಮೆಂಟ್​​​ ಝೋನ್​​ಗೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ್ ಭೇಟಿ ​ - Koppal Corona case

ಇಲ್ಲಿನ ಚಳಗೇರಾ ಕಂಟೈನ್ಮೆಂಟ್ ಝೋನ್​​ಗೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

Kushtagi: MLA Amaregouda Patil Bayyapur visits Containment Zone
ಕುಷ್ಟಗಿ: ಕಂಟೇನ್ಮೆಂಟ್​​​ ಝೋನ್​​ಗೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ್ ಭೇಟಿ ​
author img

By

Published : Jul 10, 2020, 8:10 PM IST

ಕುಷ್ಟಗಿ (ಕೊಪ್ಪಳ): ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢವಾದ ಚಳಗೇರಾ ಕಂಟೈನ್ಮೆಂಟ್ ಪ್ರದೇಶಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಟಿ ನೀಡಿದ್ದಾರೆ.

ಕುಷ್ಟಗಿ: ಕಂಟೈನ್ಮೆಂಟ್​​​ ಝೋನ್​​ಗೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪೂರ್ ಭೇಟಿ ​

ಪ್ರಾಥಮಿಕ, ದ್ವಿತೀಯ ಸಂಪರ್ಕಿತರು ಹೋಮ್ ಕ್ವಾರಂಟೈನ್ ತಪ್ಪದೇ ಪಾಲಿಸಬೇಕು. ಜನರು ಮಾಸ್ಕ್ ಇಲ್ಲದೆ ಹೊರಗೆ ಕಾಲಿಡಲು ಪ್ರಯತ್ನಿಸದಿರಿ ಎಂದರು. ಅಲ್ಲದೆ ಅಗತ್ಯ ವಸ್ತುಗಳು ಬೇಕಿದ್ದರೆ ಗ್ರಾಪಂ ಸಿಬ್ಬಂದಿಗೆ ಹಣ ನೀಡಿದರೆ ಮನೆಗೆ ತಲುಪಿಸಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ವಚ್ಛತೆ ಬಗ್ಗೆ ಗಮನಹರಿಸಿ, ಕೈಗಳನ್ನು ಸೋಪು, ಸ್ಯಾನಿಟೈಸರ್​​​ನಿಂದ ತೊಳೆಯುವುದು ಮರೆಯದಿರಿ ಎಂದು ಗ್ರಾಮಸ್ಥರಿಗೆ ತಿಳಿಹೇಳಿದರು.

ಇದೇ ವೇಳೆ ಬೆಂಗಳೂರಿನಲ್ಲಿ ಕೊರೊನಾ ಹಾವಳಿ ಹೆಚ್ಚಿರುವ ಹಿನ್ನೆಲೆ ಅಲ್ಲಿ ವಾಸವಾಗಿರುವ ಇಲ್ಲಿನ 50ಕ್ಕೂ ಹೆಚ್ಚು ಜನ ಸ್ವಗ್ರಾಮಕ್ಕೆ ಬರಲಿದ್ದಾರೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು. ಪಿಡಿಒ ಬಸವರಾಜ ಸಂಕನಾಳ, ವೈದ್ಯಾಧಿಕಾರಿ ಶರಣುಮೂಲಿಮನಿ, ಕಂದಾಯ ಅಧಿಕಾರಿ ಉಮೇಶಗೌಡ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.