ಕುಷ್ಟಗಿ (ಕೊಪ್ಪಳ) : ಪ್ರತಿವರ್ಷ ಒಂದಿಲ್ಲೊಂದು ರೋಗ, ಮಳೆ ಕೊರತೆಯಿಂದ ಎಳ್ಳು ಬೆಳೆ ಹಾಳಾಗುತ್ತಿತ್ತು. ಆದರೆ, ಈ ಬಾರಿ ಉತ್ತಮ ಮಳೆ, ರೋಗ ರುಜಿನ ಸುಳಿಯದೆ ಉತ್ತಮವಾಗಿದೆ. ಬಂಪರ್ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸೂರ್ಯಕಾಂತಿ, ಶೇಂಗಾ ಸೇರಿದಂತೆ ಖಾದ್ಯ ತೈಲದ ಬೆಲೆ ಹೆಚ್ಚಿದೆ. ಅದೇ ರೀತಿ ಎಳ್ಳು ಉತ್ಪನ್ನದ ಬೆಲೆ ಇವತ್ತಿಗೂ ಕಡಿಮೆಯಾಗಿಲ್ಲ. ಈ ಬಾರಿ ಮಳೆ ಹಾಗೂ ರೋಗರುಜಿನ ಇಲ್ಲದೆ ಸಮೃದ್ಧ ಬೆಳೆ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಆದರೆ, ಕಟಾವಿಗೆ ಮಳೆ ಅಡಚಣೆಯಾಗಿದೆ. ಈ ಬಾರಿ 3,500 ಹೆಕ್ಟೇರ್ ಪ್ರದೇಶದಲ್ಲಿ ಎಳ್ಳನ್ನು ಬೆಳೆದಿದ್ದು, ಹೆಸರು, ಸೂರ್ಯಕಾಂತಿ, ಎಳ್ಳಿನ ಬೆಳೆಗಳು ಭರವಸೆ ಮೂಡಿಸಿವೆ.
ರೈತ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿಯವರ ಶಿಫಾರಸ್ಸಿನಂತೆ ಕುಷ್ಟಗಿಯ ರೈತ ಹನಮಂತಪ್ಪ ಹಳ್ಳಿ ತಮ್ಮ 9 ಎಕರೆಯಲ್ಲಿ ಸಮೃದ್ಧ ಬೆಳೆ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬಿಳಿ ಎಳ್ಳಿಗೆ 9 ಸಾವಿರ ರೂ. ಇದ್ದು, ಈ ಉತ್ಪನ್ನ ಬೇಡಿಕೆಯಲ್ಲಿರುವುದರಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
ಓದಿ: ನನ್ನ ತಾಯಿಗೂ ಮಾರಕ ಕ್ಯಾನ್ಸರ್ ಇತ್ತು.. ಆದರೆ, ಆಗ ಟೆಕ್ನಾಲಜಿ ಇರಲಿಲ್ಲ.. ಸಿಎಂ ಬಸವರಾಜ ಬೊಮ್ಮಾಯಿ