ಕುಷ್ಟಗಿ(ಕೊಪ್ಪಳ): ಕೆಲಸವನ್ನು ಅರಸಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದ ಕುಟುಂಬಗಳು ವಾಪಾಸಾದ ಹಿನ್ನಲೆ, ತಾಲೂಕಾಡಳಿತ ಅವರನ್ನು ಕಾಟಾಪೂರ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಲು ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ತಾ.ಪಂ. ಸದಸ್ಯೆ ಶೈಲಜಾ ಸಾಂಸ್ಥಿಕ ಕ್ವಾರಂಟೈನ್ಗೆ ಭೇಟಿ ನೀಡಿ ಅಲ್ಲಿದ್ದವರಿಗೆ ಆತ್ಮಸ್ಥೈರ್ಯ ಮೂಡಿಸಿದರಲ್ಲದೇ ಅವರ ಯೋಗಕ್ಷೇಮ ಹಾಗೂ ಮೂಲಸೌಕರ್ಯಗಳ ಕುರಿತು ವಿಚಾರಿಸಿದರು. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಅಪಾಯದ ಮಟ್ಟ ಹೆಚ್ಚಾಗಿದೆ. ಇನ್ನು ಅಲ್ಲಿಗೆ ಹೋಗುವ ಯೋಚನೆ ಬೇಡ, ಇಲ್ಲಿಯೇ ಇದ್ದು ಜೀವನ ಸಾಗಿಸಿ. ಮಕ್ಕಳಿಗೆ ಉತ್ತಮ ಶೈಕ್ಷಣಿಕ ಭವಿಷ್ಯ ಕಲ್ಪಿಸಿರಿ ಎಂದು ತಿಳಿಸಿದರು.
![Kushtagi quarantine](https://etvbharatimages.akamaized.net/etvbharat/prod-images/07:32_kn-kst-06-06-katapur-quarntaine-kac10028_06062020192105_0606f_1591451465_705.jpg)
ಇದೇ ವೇಳೆ ಕ್ವಾರಂಟೈನ್ನಲ್ಲಿದ್ದವರಿಗೆ ಹಣ್ಣು, ಬಿಸ್ಕೆಟ್ ವಿತರಿಸಿದರು. ಬಳಿಕ ಕೊರೊನಾ ಭಯಾನಕ ಎಂದು ಆತಂಕಗೊಳ್ಳದಿರಿ, ವೈದ್ಯರ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು. ಈ ವೇಳೆ ಪಿಡಿಓ ಚಂದಪ್ಪ ಗುಡಿಮನಿ, ವಸತಿ ಶಾಲೆಯ ಪ್ರಾಂಶುಪಾಲ ಗುರುಬಸಪ್ಪ ಮಾಟಲದಿನ್ನಿ, ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.