ಗಂಗಾವತಿ (ಕೊಪ್ಪಳ): ಕುಡಚಿ ಶಾಸಕ ಪಿ. ರಾಜೀವ್ ನಗರಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಬಿಜೆಪಿಯ ಯಾವೊಬ್ಬ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮಾಹಿತಿ ಇಲ್ಲದಂತೆ ನಗರಕ್ಕೆ ಭೇಟಿ ನೀಡಿದ್ದ ಶಾಸಕ, ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಮನೆಗೆ ಭೇಟಿ ನೀಡಿದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಕೊಪ್ಪಳದ ವಲಯ ಕಚೇರಿಯಲ್ಲಿ ಪ್ರಥಮ ದರ್ಜೆಯ ಸಹಾಯಕ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ರವಿ ನಾಯ್ಕ್ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ನಗರದಲ್ಲಿನ ವಿರುಪಾಪುರ ತಾಂಡದಲ್ಲಿನ ತಮ್ಮ ಮನೆಯಲ್ಲಿ ರವಿನಾಯ್ಕ ವಿಶ್ರಾಂತಿ ಪಡೆಯುತಿದ್ದರು.
![Kudchi_MLA](https://etvbharatimages.akamaized.net/etvbharat/prod-images/kn-gvt-03-03-kudchi-mla-sudden-visit-to-ordinary-men-house-pic-kac10005_03112020191213_0311f_1604410933_871.jpg)
ರಸ್ತೆ ಅಪಘಾತವಾಗಿರುವ ಮಾಹಿತಿ ತಿಳಿದುಕೊಂಡ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ರಾಜೀವ್ ದಿಢೀರ್ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.
ಆರ್ಥಿಕವಾಗಿ ಅಷ್ಟೆನೂ ಸ್ಥಿತಿವಂತರಲ್ಲದ ತಾಂಡ ಅಭಿವೃದ್ಧಿ ನಿಗಮದ ಉದ್ಯೋಗಿಗೆ ರಾಜೀವ್, ವೈಯಕ್ತಿಕವಾಗಿ ಧನಸಹಾಯ ಮಾಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.