ETV Bharat / state

ಸರ್ಕಾರದ ಅನುಮತಿಗೆ ಕಾಯುತ್ತಿರುವ ನೈಟ್ ರೂಟ್ ವಾಹನಗಳು.. - latest KSRTC news

ಬೆಂಗಳೂರು, ವಿಜಯವಾಡ, ಕೊಲ್ಹಾಪುರ, ಮೈಸೂರು ಸೇರಿದಂತೆ ರಾಜ್ಯದ ನಾನಾ ಪ್ರಮುಖ ಪಟ್ಟಣಗಳಿಗೆ ನೈಟ್ ರೂಟ್ ಸರ್ವೀಸ್ ನೀಡಲು ಸಾರಿಗೆ ಇಲಾಖೆಯ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

ksrtc
ಸಾರಿಗೆ ವಾಹನ ಸೇವೆ ಸೋಮವಾರದಿಂದ ಮರು ಆರಂಭವಾಗುವ ನಿರೀಕ್ಷೆ
author img

By

Published : Jun 7, 2020, 7:22 PM IST

ಗಂಗಾವತಿ : ಲಾಕ್​ಡೌನ್ ಬಳಿಕ ಸಂಪೂರ್ಣ ಸ್ಥಗಿತವಾಗಿದ್ದ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ವಾಹನ ಸೇವೆ ಸೋಮವಾರದಿಂದ ಮರು ಆರಂಭವಾಗುವ ನಿರೀಕ್ಷೆಯಿದೆ.

ನಗರದ ಸಾರಿಗೆ ಘಟಕದಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ದಿನಕ್ಕೆ 13 ರಿಂದ 14 ಲಕ್ಷ ರೂ. ಸರಾಸರಿ ಆದಾಯ ಸಂಗ್ರಹಿಸುವ ಮೂಲಕ ಇಡೀ ಕೊಪ್ಪಳ ಜಿಲ್ಲೆಯಲ್ಲಿಯೇ ಅತ್ಯಧಿಕ ಆದಾಯ ಹೊಂದಿರುವ ಘಟಕ ಎಂದು ಗಂಗಾವತಿ ಹೆಸರು ಮಾಡಿದೆ. ಇದೀಗ ಬೆಂಗಳೂರು, ವಿಜಯವಾಡ, ಕೊಲ್ಹಾಪುರ, ಮೈಸೂರು ಸೇರಿ ರಾಜ್ಯದ ನಾನಾ ಪ್ರಮುಖ ಪಟ್ಟಣಗಳಿಗೆ ನೈಟ್ ರೂಟ್ ಸೇವೆ ನೀಡಲು ಸಾರಿಗೆ ಇಲಾಖೆಯ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಸಾರಿಗೆ ವಾಹನ ಸೇವೆ ಸೋಮವಾರದಿಂದ ಮರು ಆರಂಭ ನಿರೀಕ್ಷೆ..

ಕಳೆದ ಎರಡುವರೆ ತಿಂಗಳಿಂದ ರಸ್ತೆಗಿಳಿಯದೇ ಧೂಳು ಹಿಡಿದಿದ್ದ ಬಹುತೇಕ ಎಲ್ಲಾ ಸುಖಾಸೀನ, ಐಷಾರಾಮಿ, ಓಲ್ವೋ, ಐರಾವತ ವಾಹನಗಳನ್ನು ಶುಚಿಮಾಡಿ ಬ್ಯಾಟರಿ, ಲೈಟಿಂಗ್, ಸೀಟ್​​ ಸೇರಿ ಎಲ್ಲಾ ವ್ಯವಸ್ಥೆಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.