ಕೊಪ್ಪಳ: ಕೊರೊನಾ ನಿಯಂತ್ರಿಸುವ ಉದ್ದೇಶದಿಂದ ಎರಡನೇ ಹಂತದಲ್ಲಿ ಲಾಕ್ ಡೌನ್ ಮುಂದುವರಿಸಲಾಗಿದ್ದರೂ ಕೂಡ ನಗರದಲ್ಲಿ ಜನರು ಮಾತ್ರ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
ನಗರದಲ್ಲಿ ಅನವಶ್ಯಕವಾಗಿ ಜನರು ವಾಹನಗಳಲ್ಲಿ ತಿರುಗಾಡುತ್ತಿದ್ದಾರೆ. ಜೊತೆಗೆ ಜವಾಹರ ಲಾಲ್ ರಸ್ತೆ ಸೇರಿದಂತೆ ಕೆಲವೆಡೆ ಅಗತ್ಯ ವಸ್ತುಗಳ ಅಂಗಡಿಗಳು ಸೇರಿದಂತೆ ವಿವಿಧ ಅಂಗಡಿಗಳು ತೆರೆದಿರೋದು ಕಂಡು ಬರುತ್ತಿದೆ. ಇನ್ನು ಬ್ಯಾಂಕ್ಗಳ ಮುಂದೆ ಜನರು ಜಮಾಯಿಸುವುದು ಸಾಮಾನ್ಯವಾಗಿದೆ. ಅನಗತ್ಯವಾಗಿ ಓಡಾಡುವ ಜನರನ್ನು ನಿಯಂತ್ರಿಸಲು ಪೊಲೀಸರು ದಂಡ ಸೇರಿದಂತೆ ನಾನಾ ಕಸರತ್ತು ನಡೆಸುತ್ತಿದ್ದರೂ ಕೂಡ ಜನ ಸಾಮಾನ್ಯರು ಮಾತ್ರ ಬಗ್ಗುತ್ತಿಲ್ಲ.