ಕೊಪ್ಪಳ: ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಜಿಲ್ಲೆಯ ಭಾಗ್ಯನಗರದ ಸುಮಾರು 5 ಸಾವಿರ ಜನರಿಗೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಆಹಾರ ಸಾಮಗ್ರಿ ವಿತರಿಸಿದರು. ಇಂದು ಗ್ರಾಮೀಣ ಭಾಗದಲ್ಲಿ ಆಹಾರ ಸಾಮಗ್ರಿ ವಿತರಣೆಗೂ ಶಾಸಕರು ಚಾಲನೆ ನೀಡಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ದಾನಿಗಳ ಸಹಕಾರದೊಂದಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು 10 ಸಾವಿರ ಆಹಾರ ಸಾಮಗ್ರಿ ಕಿಟ್ ವಿರತಣೆ ಮಾಡಿದರು. ಆಹಾರ ಸಾಮಗ್ರಿಗಳ ಕಿಟ್ ಇದ್ದ ವಾಹನಗಳಿಗೆ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕೊರೊನಾ ಭೀತಿಯಿಂದ ಲಾಕ್ಡೌನ್ ಆಗಿದೆ. ಇದರಿಂದ ತೊಂದರೆಯಲ್ಲಿರುವ ನಗರ ಪ್ರದೇಶದ ಜನರಿಗೆ ಆಹಾರ ಸಾಮಗ್ರಿ ಕಿಟ್ ನೀಡಲಾಗಿದೆ. ಈಗ ಗ್ರಾಮೀಣ ಪ್ರದೇಶದಲ್ಲಿಯೂ ಸಂಕಷ್ಟದಲ್ಲಿರುವ ಜನರಿಗೆ ದಾನಿಗಳ ಸಹಕಾರದೊಂದಿಗೆ 10 ಸಾವಿರ ಕಿಟ್ ನೀಡಲಾಗುತ್ತಿದೆ. ನಮ್ಮ ಪಕ್ಷದ ಆಯಾ ಗ್ರಾಮದ ಮುಖಂಡರು ಕಿಟ್ ವಿತರಣೆ ಮಾಡಲಿದ್ದಾರೆ. ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ ಎಂದು ಜನರು ಬೇಕಾಬಿಟ್ಟಿ ಓಡಾಡಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.