ETV Bharat / state

ಕೋವಿಡ್ ಸೋಂಕಿತರಿಗೆ ಪ್ರತಿನಿತ್ಯ ಆಹಾರ ವಿತರಣೆ: ಗವಿಮಠದಿಂದ ಮಾನವೀಯ ಕಾರ್ಯ

ಕೋವಿಡ್ ನಿಯಂತ್ರಣಕ್ಕೆ ಪಣತೊಟ್ಟಿರುವ ಕೊಪ್ಪಳ ಜಿಲ್ಲಾಡಳಿತಕ್ಕೆ ಗವಿಮಠ ಬೆನ್ನೆಲುಬಾಗಿ ನಿಂತಿದ್ದು, ಸೋಂಕಿತರಿಗೆ ಪ್ರತಿನಿತ್ಯ ಆಹಾರ ವಿತರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದೆ.

author img

By

Published : May 20, 2021, 1:09 PM IST

Koppal Gavi Math Distributing food
ಗವಿಮಠದಿಂದ ಆಹಾರ ವಿತರಣೆ

ಕೊಪ್ಪಳ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಗವಿಮಠವೂ ಕೈಜೋಡಿಸಿದೆ. ಈಗಾಗಲೇ ಜಿಲ್ಲಾಡಳಿತದ ಸಹಯೋಗದಲ್ಲಿ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಹಾಗೂ 200 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಇದೀಗ ಸೋಂಕಿತರಿಗೆ ಆಹಾರವನ್ನೂ ಪೂರೈಸುತ್ತಿದೆ.

ಗವಿಮಠದಿಂದ ಕೋವಿಡ್ ಸೋಂಕಿತರಿಗೆ ಆಹಾರ ವಿತರಣೆ

ಗವಿಮಠದ ದಾಸೋಹ ಮಂಟಪದ ಅಡುಗೆ ಮನೆಯಲ್ಲಿ ಅಡುಗೆ ತಯಾರಿಸಿ, ಪ್ಯಾಕ್ ಮಾಡಿ ಕೋವಿಡ್ ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ ವಿತರಿಸಲಾಗುತ್ತಿದೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಚಪಾತಿ, ಪಲ್ಯ, ಅನ್ನ, ಸಾರು ವಿತರಣೆ ಮಾಡಲಾಗುತ್ತಿದೆ.

Koppal Gavi Math Distributing food
ಆಹಾರ ತಯಾರಿಸುತ್ತಿರುವ ಗವಿಮಠದ ಸಿಬ್ಬಂದಿ

ಆಹಾರ ವಿತರಣೆಯ ಮೆನು ಪ್ರತಿನಿತ್ಯ ಬದಲಾಯಿಸಲಾಗುತ್ತಿದೆ. ಪ್ರತಿದಿನ ನೀಡುವ ಆಹಾರದ ಮೆನು ನೋಡಿಕೊಂಡು ತಯಾರಿಕಾ ಕೆಲಸ ನಡೆಯುತ್ತದೆ. ಆಹಾರದ ಜೊತೆಗೆ ಹಣ್ಣು, ಕಷಾಯ ಕೂಡ ನೀಡಲಾಗುತ್ತಿದೆ ಎಂದು ಗವಿಮಠದ ಸಿಬ್ಬಂದಿ ತಿಳಿಸಿದ್ದಾರೆ. ಕೇವಲ ಆಹಾರ ವಿತರಣೆ ಮಾತ್ರವಲ್ಲದೆ, ಪ್ರತಿನಿತ್ಯ ಮಠದ ಸಿಬ್ಬಂದಿಯ ಮೂಲಕ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗ್ತಿದೆ. ಮಠದ ಮುಖ್ಯಸ್ಥರಾದ ಗವಿಸಿದ್ದೇಶ್ವರ ಸ್ವಾಮಿಜೀಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.