ETV Bharat / state

ಕಳೆದ ಬಾರಿ 2 ಅಂಕದಿಂದ ಹಿನ್ನಡೆ, ಈ ಬಾರಿ 646 ನೇ ಸ್ಥಾನ.. ಯುಪಿಎಸ್​ಸಿಯಲ್ಲಿ ರೈತನ ಮಗನ ಸಾಧನೆ

author img

By

Published : Aug 4, 2020, 8:03 PM IST

ತುಂಬಾ ಖುಷಿಯಾಗುತ್ತಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಶಿಕ್ಷಕರು ಕ್ಲಾಸ್ ಒನ್ ಅಧಿಕಾರಿಯಾಗಬೇಕು ಎಂದು ಹೇಳುತ್ತಿದ್ದರು. ಇದು ನನಗೆ ಪ್ರೇರಣೆ‌ ನೀಡಿತು..

ಯುಪಿಎಸ್​ಸಿಯಲ್ಲಿ ರೈತನ ಮಗನ ಸಾಧನೆ
ಯುಪಿಎಸ್​ಸಿಯಲ್ಲಿ ರೈತನ ಮಗನ ಸಾಧನೆ

ಕೊಪ್ಪಳ : ಜಿಲ್ಲೆಯ ರೈತನ ಮಗನೊಬ್ಬ ಯುಪಿಎಸ್​ಸಿ ಪರೀಕ್ಷೆಯಲ್ಲಿ 646ನೇ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದ ಯಮನಪ್ಪ ಹಾಗೂ ಹುಲಿಗೆಮ್ಮ ಎಂಬ ರೈತ ದಂಪತಿಯ 3ನೇ ಮಗನಾಗಿರುವ ರಮೇಶ ಗುಮಗೇರಿ ಎಂಬುವರು ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಗ್ರಾಮಕ್ಕೆ, ಹೆತ್ತವರಿಗೆ ಕೀರ್ತಿ ತಂದಿದ್ದಾರೆ.

ರಮೇಶ ಗುಮಗೇರಿ ಅವರು ತಮ್ಮ 5ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂದಕೂರು ಗ್ರಾಮದಲ್ಲಿ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದಾರೆ. ಅಲ್ಲದೆ ಪಿಯುಸಿಯನ್ನು ಧಾರವಾಡದಲ್ಲಿ, ಎಂಜಿನಿಯರಿಂಗ್ ಶಿಕ್ಷಣವನ್ನು ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ಎಂ.ಟೆಕ್‌ ಪದವೀಧರರಾಗಿರುವ ರಮೇಶ ಗುಮಗೇರಿ ಅವರು, ಯುಪಿಎಸ್​ಸಿ ಪರೀಕ್ಷೆ ಬರೆದು ಸಾಧನೆಗೈದಿದ್ದಾರೆ.

ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಮೇಶ್ ಗುಮಗೇರಿ, ತುಂಬಾ ಖುಷಿಯಾಗುತ್ತಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಶಿಕ್ಷಕರು ಕ್ಲಾಸ್ ಒನ್ ಅಧಿಕಾರಿಯಾಗಬೇಕು ಎಂದು ಹೇಳುತ್ತಿದ್ದರು. ಇದು ನನಗೆ ಪ್ರೇರಣೆ‌ ನೀಡಿತು.

ಯುಪಿಎಸ್​ಸಿ ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿದ್ದೆ. ಕಳೆದ ಬಾರಿ 4ನೇ ಪ್ರಯತ್ನದ ಮುಖ್ಯ ಪರೀಕ್ಷೆಯಲ್ಲಿ ಕೇವಲ 2 ಅಂಕದಿಂದ ಹಿನ್ನಡೆಯಾಗಿತ್ತು. ಪ್ರಯತ್ನ ಬಿಡದೆ ಮತ್ತೆ 5ನೇ ಬಾರಿ ಬರೆದೆ, ಯಶಸ್ಸು ಕಂಡೆ. ನಮ್ಮ ತಂದೆ ಕೃಷಿಕರಾಗಿದ್ದಾರೆ. ನನ್ನ ಕನಸು ಈಡೇರಿದೆ ಎಂದು ರಮೇಶ್ ಗುಮಗೇರಿ ಅವರು ಸಂತಸ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.