ಕೊಪ್ಪಳ: ಜಿಲ್ಲೆಯಲ್ಲಿ ಭಾನುವಾರ 378 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 106, ಗಂಗಾವತಿಯಲ್ಲಿ 199, ಕುಷ್ಟಗಿಯಲ್ಲಿ 48 ಹಾಗೂ ಯಲಬುರ್ಗಾ ತಾಲೂಕಿನ 25 ಸೇರಿ ಹೊಸದಾಗಿ ಒಟ್ಟು 378 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 22,247 ಪ್ರಕರಣಗಳು ಪತ್ತೆಯಾಗಿದ್ದು, 365 ಸೋಂಕಿತರು ಮೃತಪಟ್ಟಿದ್ದಾರೆ.
![Koppal Covid Update](https://etvbharatimages.akamaized.net/etvbharat/prod-images/11702073_238_11702073_1620609594239.png)
ಓದಿ : ರಾಜ್ಯದಲ್ಲಿಂದು ಕೋವಿಡ್ಗೆ 490 ಮಂದಿ ಬಲಿ.. 47 ಸಾವಿರಕ್ಕೂ ಅಧಿಕ ಕೇಸ್ ದಾಖಲು!
ಭಾನುವಾರ 223 ಮಂದಿ ಗುಣಮುಖರಾಗಿದ್ದು, ಇದುವರೆಗೆ 16,812 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸದ್ಯ, ಜಿಲ್ಲೆಯಲ್ಲಿ 5070 ಸಕ್ರಿಯ ಪ್ರಕರಣಗಳಿದ್ದು, 4,546 ಮಂದಿ ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. 524 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.