ETV Bharat / state

ಕೊಪ್ಪಳದಲ್ಲಿ ಪತ್ತೆಯಾದ P - 2254 ಸೋಂಕಿತನ ಟ್ರಾವೆಲ್ ಹಿಸ್ಟರಿ ಇದು!

author img

By

Published : May 26, 2020, 6:27 PM IST

ಕೊಪ್ಪಳ ಜಿಲ್ಲೆಯಲ್ಲಿ ಇಂದು ಪತ್ತೆಯಾದ P-2254 ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕಿದ್ದು, ಮೇ 20 ರಂದು ಸೋಂಕಿತ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕೇಸೂರಿಗೆ ಬಂದಿದ್ದಾನೆ. ಮೇ. 22 ರಂದು ಕೇಸೂರಿನಿಂದ ರಾಯಚೂರು ಜಿಲ್ಲೆಯ ಮಸ್ಕಿಗೆ ತೆರಳಿ ಅಂದೇ ರಾತ್ರಿ ಮತ್ತೆ ಕೇಸೂರಿಗೆ ಬಂದಿದ್ದಾನೆ ಎಂದು ತಿಳಿದು ಬಂದಿದೆ.

Travel History
ಸೋಂಕಿತನ ಟ್ರಾವೆಲ್ ಹಿಸ್ಟರಿ ಕಲೆ ಹಾಕಿದ ಜಿಲ್ಲಾಡಳಿತ

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಪತ್ತೆಯಾದ P-2254 ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕಿದೆ. ಸೋಂಕಿತನ ಸಂಪರ್ಕ ಹೊಂದಿರುವ ಆತನ ಸಹೋದರ ನಿನ್ನೆ ಕೊಪ್ಪಳ ನಗರದ ವಿವಿಧೆಡೆ ಬಂದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.

ಸೋಂಕಿತ P-2254ರ ಸಹೋದರ ನಿನ್ನೆ ಕೊಪ್ಪಳ ನಗರದ ಗಂಜ್ ಸರ್ಕಲ್ ಬಳಿ ಬಂದು ಹೋಗಿದ್ದಾನೆ. ಗಂಜ್ ಸರ್ಕಲ್ ಬಳಿ ಇರುವ ಸಂಗೀತಾ ಮೊಬೈಲ್ ಸ್ಟೋರ್​ನಲ್ಲಿ ಮೊಬೈಲ್ ಖರೀದಿಸಿದ್ದಾನೆ ಹಾಗೂ ಪಕ್ಕದಲ್ಲಿರುವ ಐಸಿಐಸಿಐ ಬ್ಯಾಂಕ್​ಗೂ ಬಂದು ಹೋಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸೋಂಕಿತನ ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಕಲೆ ಹಾಕಿದ್ದು, ಮೇ 20 ರಂದು ಸೋಂಕಿತ ವ್ಯಕ್ತಿ ಕೊಪ್ಪಳ ಜಿಲ್ಲೆಯ ಕೇಸೂರಿಗೆ ಬಂದಿದ್ದಾನೆ. ಮೇ. 22 ರಂದು ಕೇಸೂರಿನಿಂದ ರಾಯಚೂರು ಜಿಲ್ಲೆಯ ಮಸ್ಕಿಗೆ ತೆರಳಿ ಅಂದೇ ರಾತ್ರಿ ಮತ್ತೆ ಕೇಸೂರಿಗೆ ಬಂದಿದ್ದಾನೆ. ಮೇ. 24 ರಂದು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಯಾಂಪಲ್ ನೀಡಿದ್ದಾನೆ‌. ಮೇ. 25 ರಂದು ದೋಟಿಹಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎನ್ನಲಾಗಿದೆ.

ಸೋಂಕಿತ ವ್ಯಕ್ತಿ ಮಸ್ಕಿಯಲ್ಲಿನ ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವುದರಿಂದ ರಾಯಚೂರು ಜಿಲ್ಲೆಯ ನಾರಾಯಣನಗರ ಕ್ಯಾಂಪ್ ಹಾಗೂ ಜೋಳದರಾಶಿ ಕ್ಯಾಂಪ್​ನಲ್ಲಿ ರೈತರನ್ನು ಭೇಟಿ ಮಾಡಿದ್ದಾನೆ. ಇನ್ನು ಕೇಸೂರಿನ ಅಕ್ಕಪಕ್ಕದ ಮನೆಯ ಸಣ್ಣ ಸಣ್ಣ ಮಕ್ಕಳನ್ನು ಭೇಟಿ ಮಾಡಿರುವುದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.