ಗಂಗಾವತಿ (ಕೊಪ್ಪಳ) : ಲಾಕ್ಡೌನ್ ಬಳಿಕ ಸಾರ್ವಜನಿಕ ಸಭೆ, ಸಮಾರಂಭ, ಮದುವೆ, ಕಲ್ಯಾಣದಂತ ಕಾರ್ಯಕ್ರಮಗಳಲ್ಲಿ ಗಾಯನ ಕಛೇರಿಗೆ ಅವಕಾಶಗಳಿಲ್ಲದಂತಾಗಿದೆ. ಕಲಾವಿದರು ಅದರಲ್ಲೂ ಗಾಯನ ವೃತ್ತಿ ಅವಲಂಬಿತರು ಪರದಾಡುತ್ತಿದ್ದಾರೆ.
ಇದನ್ನು ಮನಗಂಡ ಕಲಾವಿದರ ಕಲ್ಯಾಣ ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದಿಂದ ಬಡ ಕಲಾವಿದರನ್ನು ಗುರುತಿಸಿ 2ನೇ ಹಂತದ ಆಹಾರ ಸಾಮಗ್ರಿಗಳ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತನ್ನ ಕಂಠಸಿರಿಯಿಂದಲೇ ಪ್ರಸಿದ್ಧಿ ಪಡೆದು ರಾಜ್ಯಾದ್ಯಂತ ಜೂನಿಯರ್ ಜಾನಕಿ ಎಂದು ಪರಿಚಿತವಾದ ಕೊಪ್ಪಳದ ಎಸ್.ಗಂಗಮ್ಮ ಅವರಿಗೆ ಆಹಾರದ ಕಿಟ್ ನೀಡಿರುವ ಸಂಘಟನೆಯ ಪ್ರಮುಖರು, ಜಿಲ್ಲೆಯ ಇತರ ಕಲಾವಿದರಿಗೆ ಇದನ್ನ ವಿಸ್ತರಿಸುವ ಬಗ್ಗೆ ನಿರ್ಣಯ ಕೈಗೊಂಡರು.