ಕುಷ್ಟಗಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ನಲ್ಲಿ ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸದೇ ನಿರ್ಲಕ್ಷ್ಯ ವಹಿಸಿರುವ ಕುರಿತು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಬ್ಯಾಂಕ್ನಲ್ಲಿ ಕನ್ನಡಿಗರನ್ನು ಕಡೆಗಾಣಿಸಲಾಗುತ್ತಿದ್ದು, ಕನ್ನಡಿಗರ ಮೇಲೆ ಬಲವಂತವಾಗಿ ಹಿಂದಿ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್, ಚಲನ್ ಎಲ್ಲವೂ ಇಂಗ್ಲಿಷ್ ಮತ್ತು ಹಿಂದಿಮಯವಾಗಿದ್ದು, ಕನ್ನಡದಲ್ಲಿ ಎಲ್ಲಿಯೂ ಸ್ಥಾನ ಕಲ್ಪಿಸಿಲ್ಲ ಎಂದು ದೂರಿದರು.
ಅಲ್ಲದೇ ಈ ಬ್ಯಾಂಕಿನ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸುವ ಬದಲಿಗೆ ಹಿಂದಿ ಭಾಷೆಯಲ್ಲಿ ಸಂವಹನ ನಡೆಸುತ್ತಿರುವುದಕ್ಕೆ ಕಾರ್ಯಕರ್ತರು ಖಂಡಿಸಿದರು. ಇನ್ನು ಮುಂದೆ ಪಾಸ್ ಬುಕ್, ಚೆಕ್ ಬುಕ್ ಹಾಗೂ ರಸೀದಿ ಮೊದಲಾದವುಗಳು ಕನ್ನಡವಾಗಿರಬೇಕು. ಇಲ್ಲವಾದಲ್ಲಿ ಬ್ಯಾಂಕಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷ ಶ್ಯಾಂಮೂರ್ತಿ ಅಂಜಿ ಎಚ್ಚರಿಕೆ ನೀಡಿದರು.