ಗಂಗಾವತಿ: ನಗರದ ಕಂಪ್ಲಿ ರಸ್ತೆಯಲ್ಲಿರುವ ಸ್ಪಂದನ ಕ್ರೀಡೆ ಮತ್ತು ಮನೋಲ್ಲಾಸ ಕ್ಲಬ್ ಮೇಲೆ ದಾಳಿ ಮಾಡಿದ್ದ ಪೊಲೀಸರು, 24 ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದು, ಜೂಜುಕೋರರಲ್ಲಿ ಪತ್ರಕರ್ತ, ಕೃಷಿ ಇಲಾಖೆಯ ನೌಕರ, ಶಿಕ್ಷಕರು ತಲಾ ಒಬ್ಬರಿದ್ದು, ಬಹುಪಾಲು ವ್ಯವಸಾಯಗಾರರು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ.
24 ಜೂಜುಕೋರರಲ್ಲಿ ಹತ್ತಕ್ಕೂ ಹೆಚ್ಚು ಜನ ವ್ಯವಸಾಯವನ್ನೆ ಪ್ರಧಾನ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಮಿಕ್ಕಂತೆ ಒಬ್ಬ ಪತ್ರಕರ್ತ, ಕೃಷಿ ಇಲಾಖೆಯ ನೌಕರ, ಕುಕನೂರು ತಾಲ್ಲೂಕಿನ ಒಬ್ಬ ಶಿಕ್ಷಕ ಸೇರಿದಂತೆ, ಮೂರುಜನ ವ್ಯಾಪಾರಿಗಳು, ಕೂಲಿಕಾರರು ಇದ್ದಾರೆ.
ಜೂಜುಕೋರರಲ್ಲಿ ಬಹುತೇಕರು ಬಳ್ಳಾರಿ ಜಿಲ್ಲೆಯ ಕಂಪ್ಲಿ, ವೀರಾಪುರ, ಹೊಸಪೇಟೆ, ಕಮಲಾಪುರ, ಸಾಣಾಪುರ, ಕುರುಗೋಡು, ಕೊಪ್ಪಳ ಜಿಲ್ಲೆಯ ಮುನಿರಾಬಾದ್, ಗಿಣಿಗೇರಾ, ಕುಕುನೂರು, ಹೊಸಳ್ಳಿ, ಹೊಸಕೇರಾ, ಮಂಗಳಾಪುರ ಮೊದಲಾದ ಊರುಗಳಿಂದ ಆಗಮಿಸಿದ್ದರು.