ETV Bharat / state

ಕೊಪ್ಪಳದಲ್ಲಿ ದಾಖಲೆ ನಿರ್ಮಿಸಿದ ಜೇಮ್ಸ್.. 124 ಜನರಿಂದ ನೇತ್ರದಾನ, 78 ಮಂದಿಯಿಂದ ರಕ್ತದಾನ

author img

By

Published : Mar 17, 2022, 7:14 PM IST

ಅಭಿಮಾನಿಗಳ ಒತ್ತಾಸೆಗೆ ಒಂದು ಸಿನಿಮಾ ಹೆಚ್ಚೆಂದರೆ ನಾಲ್ಕು, ಆರು, ಎಂಟು ಹತ್ತು ಶೋ ನೀಡಬಹುದು. ಆದರೆ ಗುರುವಾರ ತೆರೆಕಂಡ ಡಾ. ಪುನಿತ್​​ ರಾಜ್ ಕುಮಾರ್​​ ಅಭಿನಯದ ಜೇಮ್ಸ್ ಸಿನಿಮಾ, ಕೊಪ್ಪಳ ಜಿಲ್ಲೆಯ ಮಟ್ಟಿಗೆ ಆಲ್ ಟೈಂ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದೆ.

James set a record in Koppal
ಕೊಪ್ಪಳದಲ್ಲಿ ದಾಖಲೆ ನಿರ್ಮಿಸಿದ ಜೇಮ್ಸ್

ಗಂಗಾವತಿ (ಕೊಪ್ಪಳ): ನಗರದ ಶಿವೆ, ಕನಕದುರ್ಗಾ, ಅಮರ ಮತ್ತು ಸಂದೀಪ ಎಂಬ ನಾಲ್ಕು ಚಿತ್ರ ಮಂದಿರಗಳಲ್ಲಿ ಜೇಮ್ಸ್​​ ಸಿನಿಮಾ, ಏಕಕಾಲಕ್ಕೆ ಗುರುವಾರ ತೆರೆ ಕಂಡಿದೆ. ಈ ಮೂಲಕ ಒಟ್ಟು 20 ಶೋಗಳನ್ನು ಪ್ರದರ್ಶಿಸಿದ ಹೆಗ್ಗಳಿಕೆಗೆ ಜೇಮ್ಸ್ ಚಿತ್ರ ಪಾತ್ರವಾಗಿದೆ.

ಬೆಳಗ್ಗೆ ನಾಲ್ಕು ಗಂಟೆಗೆ ಲೈಸೆನ್ಸ್ ಸಿಗುತ್ತಿದ್ದಂತಿಯೇ 4.15ರಿಂದ ಫ್ಯಾನ್ಸ್ ಶೋ ಆರಂಭಿಸಲಾಗಿದೆ. ಸಂದೀಪ್ ಚಿತ್ರ ಮಂದಿರದಲ್ಲಿ ಜೇಮ್ಸ್​​ ತೆಲುಗು ಚಿತ್ರದ ನಾಲ್ಕು ಶೋ ನೀಡಲಾಗಿದೆ. ಶಿವೆಯಲ್ಲಿ ಆರು ಶೋ, ಕನಕದುರ್ಗ ಮತ್ತು ಅಮರ ಚಿತ್ರ ಮಂದಿರದಲ್ಲಿ ತಲಾ ಐದು ಶೋಗೆ ಅವಕಾಶ ನೀಡಲಾಗಿದೆ ಎಂದು ಶಿವೆ ಚಿತ್ರ ಮಂದಿರದ ಮಾಲೀಕ ಶಿವರಾಜಗೌಡ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ದಾಖಲೆ ನಿರ್ಮಿಸಿದ ಜೇಮ್ಸ್

124 ಜನರಿಂದ ನೇತ್ರದಾನ, 78 ಜನರಿಂದ ರಕ್ತದಾನ: ನಟ ಪುನಿತ್ ರಾಜ್ ಅವರ ಸಾಮಾಜಿಕ ಕಾರ್ಯವನ್ನು ಮಾದರಿಯಾಗಿ ತೆಗೆದುಕೊಂಡಿರುವ ಅವರ ಅಭಿಮಾನಿಗಳ ಪೈಕಿ 124 ಜನ ನೇತ್ರದಾನಕ್ಕೆ ಮುಂದಾಗಿದ್ದಾರೆ. ಜೇಮ್ಸ್ ಚಿತ್ರ ರಿಲೀಸ್ ಮತ್ತು ಅಪ್ಪು ಹುಟ್ಟುಹಬ್ಬ ಅಂಗವಾಗಿ, ನೀಲಕಂಠೇಶ್ವರ ಅಪ್ಪು ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 78 ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಇದೇ ಶಿಬಿರದ ಮೂಲಕ 124 ಜನ, ತಮ್ಮ ಇಹಲೋಕದ ಯಾತ್ರೆಯ ಬಳಿಕ ನೇತ್ರದಾನ ಮಾಡುವುದಾಗಿ ವಾಗ್ದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ದೇಶಪ್ರೇಮದ ಜೊತೆ ಸ್ನೇಹ ಸಂಬಂಧದ ಮೌಲ್ಯ ಹೆಚ್ಚಿಸುವ 'ಜೇಮ್ಸ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.