ETV Bharat / state

ಹೆಲಿಕಾಪ್ಟರ್ ಮೂಲಕ​ ಪುನೀತ್ ಕಟೌಟ್​ಗೆ ಪುಷ್ಪಾರ್ಪಣೆಗೆ ಸಿಗದ ಅವಕಾಶ: ಅಭಿಮಾನಿಗಳಿಂದ ದಾಂಧಲೆ

author img

By

Published : Mar 17, 2022, 1:58 PM IST

ಹೆಲಿಕಾಪ್ಟರ್ ಮೂಲಕ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕಟೌಟ್​ಗಳಿಗೆ ಪುಷ್ಪಾರ್ಪಣೆ ಮಾಡಲು ಅವಕಾಶ ನೀಡದ್ದರಿಂದ ಗಂಗಾವತಿಯಲ್ಲಿ ಆಕ್ರೋಶಗೊಂಡ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ದಾಂಧಲೆ ನಡೆಸಿದ್ದಾರೆ.

james-fans-outrage-against-helicopter-celebration-ban
ಹೆಲಿಕಾಪ್ಟರ್ ಮೂಲಕ​ ಪುನೀತ್ ಕಟೌಟ್​ಗೆ ಪುಷ್ಪಾರ್ಪಣೆಗೆ ಸಿಗದ ಅವಕಾಶ

ಗಂಗಾವತಿ: ಹೆಲಿಕಾಪ್ಟರ್ ಮೂಲಕ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕಟೌಟ್​ಗಳಿಗೆ ಪುಷ್ಪಾರ್ಪಣೆ ಮಾಡಲು ಅವಕಾಶ ನೀಡದ್ದರಿಂದ ಆಕ್ರೋಶಗೊಂಡ ಅಭಿಮಾನಿಗಳು ಇಲ್ಲಿನ ಚಿತ್ರಮಂದಿರಗಳಲ್ಲಿ ದಾಂಧಲೆ ನಡೆಸಿದ್ದಾರೆ.

ನಗರದ ಅನೇಕ ಕಡೆಗಳಲ್ಲಿ ಪುನೀತ್ ಕಟೌಟ್ ಹಾಕಿದ್ದ ಅಭಿಮಾನಿಗಳು, ಅಪ್ಪು ಜನ್ಮ ದಿನಾಚರಣೆ ಮತ್ತು ಜೇಮ್ಸ್ ಜಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದರು. ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಪಣೆ ಮಾಡುವ ಯೋಜನೆ ರೂಪಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದರು ಎನ್ನಲಾಗಿದೆ. ಗಂಗಾವತಿ, ಹೊಸಪೇಟೆ ಮತ್ತು ಗದಗದ ಅಭಿಮಾನಿಗಳು ತಲಾ ಎರಡು ಲಕ್ಷ ರೂಪಾಯಿ ಬಾಡಿಗೆ ನೀಡಿ ಹೆಲಿಕಾಪ್ಟರ್ ತರಿಸುವ ಯೋಜನೆ ಇರಿಸಿಕೊಂಡಿದ್ದರು. ಆದರೆ, ಅವಕಾಶ ನೀಡದ್ದರಿಂದ ಯೋಜನೆ ಸ್ಥಗಿತವಾಗಿತ್ತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರ ಮಂದಿರಗಳತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಗಂಗಾವತಿ ನಗರದ ಶಿವೆ, ಕನಕದುರ್ಗ ಮತ್ತು ಅಮರ ಚಿತ್ರ ಮಂದಿರಗಳ ಪೈಕಿ ಕೆಲ ಮಂದಿರಗಳ ಗಾಜು, ಕಿಟಕಿಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೋಲಾರದಲ್ಲೂ ಜೇಮ್ಸ್​ ಸದ್ದು: ಟಿಕೆಟ್​ ಸಿಗದೇ ಕಣ್ಣೀರಿಟ್ಟ ಅಭಿಮಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.