ETV Bharat / state

ಸಜ್ಜೆ,ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಕರವೇ ಯುವ ಸೈನ್ಯ ಒತ್ತಾಯ - Insistence on Crop Support Pricing Center

ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಯಾಗಿದೆ. ಹೆಚ್ಚಿನ ಬೆಲೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಪ್ರತಿನಿಧಿಸಿರುವ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಈ ಜಿಲ್ಲೆಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು..

kustagi
ತಹಶೀಲ್ದಾರ ಹೆಚ್. ವಿಜಯಾ ಅವರಿಗೆ ಮನವಿ
author img

By

Published : Sep 7, 2020, 10:25 PM IST

ಕುಷ್ಟಗಿ(ಕೊಪ್ಪಳ) : ಕುಷ್ಟಗಿ ತಾಲೂಕಾದ್ಯಂತ ಉತ್ತಮ ಮಳೆ ಹಿನ್ನೆಲೆ ಸಜ್ಜೆ, ಮೆಕ್ಕೆಜೋಳ ಭರ್ಜರಿ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದು, ಈ ಹಿನ್ನೆಲೆ ಕೂಡಲೇ ಈ ಎರಡು ಬೆಳೆಗಳ ಖರೀದಿ ಕೇಂದ್ರ ಆರಂಭಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಕಾರ್ಯಕರ್ತರು, ಗ್ರೇಡ್-2 ತಹಶೀಲ್ದಾರ್​ ಹೆಚ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು.

ಸಜ್ಜೆ,ಮೆಕ್ಕೆಜೋಳ ಬೆಳೆಗಳ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಮಾರುಕಟ್ಟೆಯಲ್ಲಿ ಸಜ್ಜೆ ಪ್ರತಿ ಕ್ವಿಂಟಲ್​ಗೆ ₹1,600 ರಿಂದ 1,700, ಮೆಕ್ಕೆಜೋಳ ಪ್ರತಿ ಕ್ವಿಂಟಲ್​ಗೆ ₹1,700 ದಿಂದ 1,800 ರೂ. ಇತ್ತು. ಬೆಳೆ ಉತ್ಪನ್ನ ಹೆಚ್ಚುತ್ತಿದ್ದಂತೆ ಸದ್ಯ ಸಜ್ಜೆ 1,100 ರೂ., ಮೆಕ್ಕೆಜೋಳ 1,200 ರೂ. ಪ್ರತಿ ಕ್ವಿಂಟಲ್​ಗೆ ಕುಸಿತ ಕಂಡಿದೆ. ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆ, ಬೆಳೆ ಇದ್ದಾಗ್ಯೂ ನ್ಯಾಯಯುತ ಬೆಲೆಯಿಂದ ರೈತರು ವಂಚಿತರಾಗುವ ಸಾಧ್ಯತೆಗಳಿವೆ. ಹೀಗಾಗಿ, ಮೆಕ್ಕೆಜೋಳ ಹಾಗೂ ಸಜ್ಜೆ ಬೆಂಬಲ ಕೇಂದ್ರ ಸ್ಥಾಪಿಸಬೇಕು.

ಅಲ್ಲದೇ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕೃತಕ ಅಭಾವ ಸೃಷ್ಟಿಯಾಗಿದೆ. ಹೆಚ್ಚಿನ ಬೆಲೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಪ್ರತಿನಿಧಿಸಿರುವ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಈ ಜಿಲ್ಲೆಯಲ್ಲಿ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಮನವಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹುಲಗಪ್ಪ ಚೂರಿ, ನಾಗರಾಜ ಉಪ್ಪಾರ, ಮನ್ಸೂರಸಾಬ್ ಗುಮಗೇರಿ, ಅಮರೇಶ್ ನಾಗರಾಳ ಮತ್ತಿತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.