ETV Bharat / state

ಕೊಪ್ಪಳದಲ್ಲಿವೆ ಅಶೋಕನ ಕಾಲದ ಶಿಲಾ ಶಾಸನಗಳು: ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯ ಆರೋಪ

author img

By

Published : Dec 25, 2020, 6:27 PM IST

ರಾಜ್ಯದಲ್ಲಿ ದೊರೆತ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕನ ಮಹತ್ವದ ಶಿಲಾ ಶಾಸನಗಳಲ್ಲಿ ಕೊಪ್ಪಳದಲ್ಲಿ ಇರುವ ಎರಡು ಶಿಲಾ ಶಾಸನಗಳು ಅತ್ಯಂತ ಮಹತ್ವದ್ದಾಗಿವೆ. ಆದರೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ, ಒಂದೆರಡು ಬೋರ್ಡ್ ಹಾಕಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎನ್ನಲಾಗಿದೆ.

ಅಶೋಕನ ಕಾಲದ ಶಿಲಾಶಾಸನಗಳು ಕೊಪ್ಪಳದಲ್ಲಿ ಪತ್ತೆ

ಕೊಪ್ಪಳ: ಶಾಸನಗಳು, ಕೋಟೆ ಕೊತ್ತಲಗಳು, ಐತಿಹಾಸಿಕ‌ ಸ್ಮಾರಕಗಳು ನಮ್ಮ ಪೂರ್ವಜರ ಇತಿಹಾಸವನ್ನು ಸಾರುವ ಅಮೂಲ್ಯ ಕೊಡುಗೆಗಳು. ಇವುಗಳನ್ನು ಉಳಿಸಿ, ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಇತಿಹಾಸ ಅರಿಯಲು ಅನುಕೂಲ ಮಾಡಿಕೊಡಬೇಕು. ಆದರೆ ಸರ್ಕಾರದ ಹಾಗೂ ಸ್ಥಳೀಯರ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ ಅದೆಷ್ಟೋ ಇತಿಹಾಸದ ಕುರುಹುಗಳು ನಾಮಾವಶೇಷವಾಗಿವೆ. ಇನ್ನು ಕೆಲವು ಐತಿಹಾಸಿಕ ದಾಖಲೆಗಳು ಅವನತಿಯತ್ತ ಸಾಗುತ್ತಿವೆ. ಅದರಂತೆ ಕೊಪ್ಪಳದಲ್ಲಿರುವ ಅಶೋಕನ ಶಿಲಾ ಶಾಸನಗಳು ಸಹ ಇದೇ ಹಾದಿಯಲ್ಲಿವೆ ಎಂದೇ ಹೇಳಬಹುದು.

ಅಶೋಕನ ಕಾಲದ ಶಿಲಾ ಶಾಸನಗಳು

ರಾಜ್ಯದಲ್ಲಿ ದೊರೆತಿರುವ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಸಾಮ್ರಾಟ್ ಅಶೋಕನ ಮಹತ್ವದ ಶಿಲಾ ಶಾಸನಗಳಲ್ಲಿ ಕೊಪ್ಪಳದಲ್ಲಿ ದೊರೆತ ಎರಡು ಶಿಲಾ ಶಾಸನಗಳು ಸಹ ಅಷ್ಟೇ ಪ್ರಮುಖ್ಯತೆ ಪಡೆದುಕೊಂಡಿವೆ. ಕೊಪ್ಪಳದ ಗವಿಮಠದ ಬೆಟ್ಟದಲ್ಲಿ ಒಂದು ಹಾಗೂ ಮಳೇಮಲ್ಲೇಶ್ವರ ದೇವಸ್ಥಾನದ ಬಳಿಯ ಬೆಟ್ಟದಲ್ಲಿ ಒಂದು ಶಾಸನ ಪತ್ತೆಯಾಗಿದೆ. ಗವಿಮಠ ಹಾಗೂ ಪಾಲ್ಕಿಗುಂಡು ಶಾಸನಗಳ ರಕ್ಷಣೆ ಅಗತ್ಯವಿದೆ. ಐತಿಹಾಸಿಕ ಮಹತ್ವದ ಶಾಸನಗಳಾಗಿರುವ ಈ ಸ್ಥಳದಲ್ಲಿ ಪುರಾತತ್ವ ಇಲಾಖೆ ಒಂದೆರಡು ಬೋರ್ಡ್ ಹಾಕಿರುವುದನ್ನು ಬಿಟ್ಟರೆ ಅಲ್ಲಿ ಸರಿಯಾದ ರಸ್ತೆ, ಮಾರ್ಗಸೂಚಿ ಯಾವುದೂ ಇಲ್ಲ. ಆಸಕ್ತರು ಈ ಶಾಸನಗಳನ್ನು ನೋಡಬೇಕು ಎಂದರೆ ಅತ್ಯಂತ ಪ್ರಯಾಸ ಪಡಬೇಕು. ಈ ಶಾಸನ ನೋಡಲು ಬಂದವರಲ್ಲಿನ ಕೆಲ ಕಿಡಿಗೇಡಿಗಳು ಈ ಶಾನಗಳ ಮೇಲೆ ಏನೇನೋ ಗೀಚಿ ಹಾಳು ಮಾಡುತ್ತಿದ್ದಾರೆ.

ಓದಿ: ಗಂಗಾವತಿ: ಬೆಟ್ಟದ ತುದಿಯಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷ... ಜನರಲ್ಲಿ ಹೆಚ್ಚಿದ ಆತಂಕ!

ಮಕ್ಕಳಿಗೆ ಇತಿಹಾಸದ ಬಗ್ಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಇಂತಹ ಸ್ಥಳಗಳಿಗೆ ನಾವು ಕರೆದುಕೊಂಡು ಬಂದಿರುತ್ತೇವೆ. ಆದರೆ ಕೊಪ್ಪಳದಲ್ಲಿನ ಈ ಎರಡು ಶಾಸನಗಳ ಸ್ಥಳದಲ್ಲಿ ಸರಿಯಾದ ಸಂರಕ್ಷಣೆ ಇಲ್ಲದೆ ಇರೋದು ಬೇಸರದ ಸಂಗತಿ. ಈ ಶಾಸನಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಾಚ್ಯವಸ್ತು ಇಲಾಖೆ ಗಮನ ನೀಡಬೇಕು ಎಂದು ಆಗ್ರಹಿಸುತ್ತಾರೆ ಶಿಕ್ಷಕ ಬೀರಪ್ಪ ಅಂಡಗಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.