ETV Bharat / state

ಜಿಂದಾಲ್​ ಉದ್ಯೋಗಿಗಳಿಗೆ ಕೊರೊನಾ ಲಕ್ಷಣಗಳು ಇದ್ದರೆ ಕೂಡಲೇ ತಿಳಿಸಿ : ಸುನೀಲಕುಮಾರ್ - ಕೊಪ್ಪಳ ಸುದ್ದಿ

ಕೊಪ್ಪಳ ಜಿಲ್ಲೆಯಲ್ಲಿನ ಜಿಂದಾಲ್ ಉದ್ಯೋಗಿಗಳ ಕುಟುಂಬದವರಿಗೆ ಸೋಂಕಿತ ಲಕ್ಷಣಗಳು ಕಂಡುಬಂದರೆ ಕೂಡಲೇ‌ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಸೂಚನೆ ನೀಡಿದ್ದಾರೆ.

Information if Jindal employees have corona symptoms
ಸುನೀಲಕುಮಾರ್
author img

By

Published : Jun 19, 2020, 6:21 PM IST

Updated : Jun 19, 2020, 7:14 PM IST

ಕೊಪ್ಪಳ : ಜಿಲ್ಲೆಯಲ್ಲಿ ಎಷ್ಟು ಜನ ಜಿಂದಾಲ್ ಉದ್ಯೋಗಿಗಳಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಜಿಂದಾಲ್ ಕಾರ್ಖಾನೆಗೆ ಪತ್ರ ಬರೆಯಲಾಗಿದೆ. ಜಿಲ್ಲೆಯಲ್ಲಿನ ಜಿಂದಾಲ್ ಉದ್ಯೋಗಿಗಳ ಕುಟುಂಬದವರಿಗೆ ಸೋಂಕಿತ ಲಕ್ಷಣಗಳು ಕಂಡುಬಂದರೆ ಕೂಡಲೇ‌ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಸೂಚನೆ ನೀಡಿದ್ದಾರೆ.

ವಿವಿಧ ಮೂಲಗಳ ಪ್ರಕಾರ ಕೊಪ್ಪಳ ತಾಲೂಕಿನ ಮುನಿರಾಬಾದ್​​​ನಲ್ಲಿ 30 ಜನ ಉದ್ಯೋಗಿಗಳು ಹಾಗೂ ಕಾರಟಗಿ ಭಾಗದಲ್ಲಿಯೂ ಉದ್ಯೋಗಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಜಿಂದಾಲ್ ಉದ್ಯೋಗಿಗಳ ಕುಟುಂಬದವರು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಬಳ್ಳಾರಿಯಲ್ಲಿ ಪಾಸಿಟಿವ್ ಬಂದಿರುವ ಜಿಂದಾಲ್ ಉದ್ಯೋಗಿಗಳ ಕುಟುಂಬದವರು ಕೊಪ್ಪಳದಲ್ಲಿದ್ದರೂ ಅವರು‌ ಹೊಂ ಕ್ವಾರಂಟೈನ್‌ನಲ್ಲಿರಬೇಕು. ಅಲ್ಲದೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ಆರೋಗ್ಯ ಅಧಿಕಾರಿಗಳಿಗೆ ಅಥವಾ ಅಲ್ಲಿನ ತಹಸೀಲ್ದಾರರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸುನೀಲಕುಮಾರ್

ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಜಿಂದಾಲ್ ಉದ್ಯೋಗಿಗಳು ಎಷ್ಟಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಜಿಂದಾಲ್​​ಗೆ ಪತ್ರ ಬರೆಯಲಾಗಿದೆ. ಇಂದು ಸಂಜೆ ಜಿಂದಾಲ್‌ನವರು ಖಚಿತ ಮಾಹಿತಿ ನೀಡುವ ನಿರೀಕ್ಷೆ‌ ಇದೆ ಎಂದರು. ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಿದರೂ ಉಲ್ಲಂಘನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ ಅಂತಹವರ ವಿರುದ್ದ ಕೇಸ್ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಎಚ್ಚರಿಕೆ ನೀಡಿದ್ದಾರೆ.

Last Updated : Jun 19, 2020, 7:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.