ETV Bharat / state

ಯುವಜನತೆಯಲ್ಲಿ ಹೆಚ್​ಐವಿ ಹೆಚ್ಚಳ: ಸೋಂಕಿತರಿಗಾಗಿ ವಧು-ವರರ ಸಮಾವೇಶ- ವೈದ್ಯರ ಮಾಹಿತಿ

ಅನೇಕ ಜಾಗೃತಿ, ಸಲಹಾ ಕೇಂದ್ರಗಳ ಹೊರತಾಗಿಯೂ ಹದಿಹರೆಯದವರು ಹೆಚ್​ಐವಿ ಸೋಂಕಿತರಾಗುತ್ತಿದ್ದಾರೆ. ಅವರಿಗಾಗಿ ರಾಜ್ಯ ಮಟ್ಟದ ವಧು-ವರರ ಸಮಾವೇಶವನ್ನು ಇದೇ ಜನವರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶಶಿಧರ್ ತಿಳಿಸಿದ್ದಾರೆ.

Dr. Shashidhar
ಡಾ. ಶಶಿಧರ್
author img

By ETV Bharat Karnataka Team

Published : Jan 6, 2024, 6:10 PM IST

Updated : Jan 6, 2024, 6:36 PM IST

ಈಟಿವಿ ಭಾರತ ಜೊತೆ ಮಾತನಾಡಿದ ಡಾ. ಶಶಿಧರ್

ಕೊಪ್ಪಳ: ಮನುಷ್ಯನಿಗೆ ಬರುವ ಹಲವಾರು ಸೋಂಕುಗಳಲ್ಲಿ ಅನೇಕ ಕೆಲವುಗಳ ಹೆಸರು ಕೇಳುತ್ತಲೇ ಜನರು ಬೆಚ್ಚಿ ಬೀಳುತ್ತಾರೆ. ಅದರಲ್ಲೂ ಹೆಚ್‌ಐವಿ ಸೋಂಕು ಎಂದರೆ ಇನ್ನಷ್ಟು ಭಯ ಹುಟ್ಟಿಕೊಳ್ಳುತ್ತೆ. ಪರಿಸ್ಥಿತಿ ಹೀಗಿರುವಾಗ ಆಧುನಿಕ ಜೀವನ ಶೈಲಿ ಹಾಗೂ ಆಕರ್ಷಣೆಯಿಂದಾಗಿ ಅನೇಕರು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಪ್ರಸಕ್ತ ದಿನಗಳಲ್ಲಿ ಹೆಚ್‌ಐವಿ/ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆಯಾದರೂ, ಕೊಪ್ಪಳ ಜಿಲ್ಲೆಯ ಎರಡು ಎಆರ್‌ಟಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ಸೋಂಕಿತರಲ್ಲಿ ಹದಿಹರೆಯದವರ ಸಂಖ್ಯೆ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಶಶಿಧರ್​ ಅವರು ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಏಡ್ಸ್​ ಸೊಂಕಿತರ ಅಂಕಿ ಸಂಖ್ಯೆ: ಕೊಪ್ಪಳ ಜಿಲ್ಲೆಯ ಒಟ್ಟು 7 ತಾಲೂಕುಗಳ ಪೈಕಿ ಕೊಪ್ಪಳ ಮತ್ತು ಗಂಗಾವತಿಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಎರಡೂ ಕೇಂದ್ರಗಳಲ್ಲಿ ನೋಂದಣಿಯಾಗಿರುವ ರೋಗಿಗಳ ಸಂಖ್ಯೆ ಒಟ್ಟು 367 ಆಗಿದ್ದು, ಇದರಲ್ಲಿ ಮದುವೆಯಾಗದವರೂ ಇದ್ದಾರೆ. ಈ ಪೈಕಿ 18 ರಿಂದ 21 ವರ್ಷದೊಳಗಿನ 18 ಯುವಕರು, 35 ಯುವತಿಯರು, 21 ರಿಂದ 35 ವರ್ಷದೊಳಗಿನ 158 ಪುರುಷರು ಹಾಗೂ 67 ಮಹಿಳೆಯರು, 35 ರಿಂದ 45 ವರ್ಷದೊಳಗಿನ 32 ಜನ ಪುರುಷರು ಹಾಗೂ 10 ಜನ ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಲಿಂಗತ್ವ ಅಲ್ಪ ಸಂಖ್ಯಾತರಿಗೂ ಏಡ್ಸ್: ಕೇವಲ ಯುವಕ- ಯುವತಿಯರಿಗಲ್ಲದೇ ಲಿಂಗತ್ವ ಅಲ್ಪಸಂಖ್ಯಾತರಲ್ಲೂ ಏಡ್ಸ್ ಕಾಣಿಸಿಕೊಂಡಿದೆ. 21 ರಿಂದ 35 ವರ್ಷದೊಳಗಿನ 8 ಜನರಲ್ಲಿ ಹಾಗೂ 36 ರಿಂದ 45 ವರ್ಷದೊಳಗಿನ ಇಬ್ಬರು ಮಂಗಳಮುಖಿಯರು ಹೆಚ್​ಐವಿ ಸೋಂಕಿತರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯಮಟ್ಟದ ವಧು ವರರ ಸಮಾವೇಶ: ಹೆಚ್​ಐವಿ ಸೋಂಕಿತರಿಗಾಗಿ ರಾಜ್ಯ ಮಟ್ಟದ ವಧು-ವರರ ಸಮಾವೇಶವನ್ನು ಇದೇ ಜನವರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಆದಷ್ಟು ಬೇಗ ಸಮಯ ಮತ್ತು ಸ್ಥಳವನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ 2,361 ಪುರುಷರು, 3,525 ಜನ ಮಹಿಳೆಯರು ಸೇರಿ ಒಟ್ಟು 6,431 ಜನ ಹೆಚ್‌ಐವಿ ಸೋಂಕಿತರಿದ್ದು, ಏಆರ್‌ಟಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ತಿಳಿದು ಮಾಡಿರುವ ತಪ್ಪೋ ಅಥವಾ ತಿಳಿಯದೇ ಆದ ಪ್ರಮಾದವೋ ಗೊತ್ತಿಲ್ಲ. ಆದರೆ ಹದಿ ಹರೆಯದ ವಯಸ್ಸಿನಲ್ಲಿಯೇ ಯುವಕ ಯುವತಿಯರು ಈ ಸೋಂಕಿಗೆ ತುತ್ತಾಗುತ್ತಿರುವುದು ನಿಜಕ್ಕೂ ದುರಂತ. ಇಲಾಖೆಯ ಜಾಗೃತಿ ಕಾರ್ಯಕ್ರಮಗಳನ್ನು ಹೊರತುಪಡಿಸಿಯೂ ಯುವಕ ಯುವತಿರು ಸ್ವಯಂ ಜಾಗೃತಿ ಹೊಂದಬೇಕಿದೆ ಎಂದು ಡಾ. ಶಶಿಧರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಧೂಮಪಾನಕ್ಕಿಂತಲೂ ಅಪಾಯ ಬೈಪೋಲಾರ್​ ಸಮಸ್ಯೆ: ಅಧ್ಯಯನ

Last Updated : Jan 6, 2024, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.