ಕೊಪ್ಪಳ: ಈ ಸಾರಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದು ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ ಎನ್ನುವುನ್ನು ಸಾಬೀತುಪಡಿಸಿದ್ದಾರೆ. ಹಾಗಾದರೆ, ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಎಷ್ಟಿರಬಹುದು?
ಹೌದು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು ಮತದಾರರಲ್ಲಿ ಮಹಿಳಾ ಮತದಾರರ ಸಂಖ್ಯೆ ಇದೀಗ ಹೆಚ್ಚಾಗಿದೆ. ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕನಕಗಿರಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಮತ್ತು ಬಳ್ಳಾರಿ ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದ್ದು ಈ ಸಾರಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ ಕಂಡುಬಂದಿದ್ದಾರೆ.
ಒಟ್ಟಾರೆಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸ್ತುತ 2019 ಜ. 16ರ ವರೆಗಿನ ಅಂತಿಮ ಮತದಾರರ ಪಟ್ಟಿಯಂತೆ 17,16,760 ಮತದಾರರು ಇದ್ದಾರೆ. ಈ ಪೈಕಿ 853745 ಪುರುಷ ಮತದಾರರಿದ್ದರೆ 862903 ಮಹಿಳಾ ಹಾಗೂ ಇತರೆ 113 ಮತದಾರರಿದ್ದಾರೆ. ಪುರುಷ ಮತದಾರರಿಗಿಂತ 9158 ಮಹಿಳಾ ಮತದಾರರು ಈ ಕ್ಷೇತ್ರದಲ್ಲಿ ಹಚ್ಚಾಗಿ ಕಂಡುಬಂದಿದ್ದಾರೆ.
ಇನ್ನು ಕ್ಷೇತ್ರವಾರು ನೋಡುವುದಾದರೆ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ಕೊಪ್ಪಳ, ಸಿರಗುಪ್ಪಾ, ಗಂಗಾವತಿ, ಕನಕಗಿರಿ, ಮಸ್ಕಿ ಹಾಗೂ ಸಿಂಧನೂರಿನಲ್ಲಿ ಪುರುಷ ಮತದಾರರಿಂತ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ 119292 ಪುರುಷ ಮತದಾರರಿದ್ದರೆ 119627 ಮಹಿಳಾ ಮತದಾರರಿದ್ದಾರೆ. ಶಿರಗುಪ್ಪಾ ವಿಧಾನಸಭಾ ಕ್ಷೇತ್ರದಲ್ಲಿ 101016 ಪುರುಷರು, 103036 ಮಹಿಳೆಯರು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 96881 ಪುರುಷರು ಹಾಗೂ 97578 ಮಹಿಳಾ ಮತದಾರರು ಇದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 105077 ಪುರುಷರು ಹಾಗೂ 107485 ಮಹಿಳಾ ಮತದಾರರು ಇದ್ದಾರೆ. ಇನ್ನು ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 97377 ಪುರುಷರು ಹಾಗೂ ಮಹಿಳೆಯರು 100442 ಮಹಿಳಾ ಮತದಾರರು ಇದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 115349 ಪುರುಷರು ಹಾಗೂ 119119 ಮಹಿಳಾ ಮತದಾರರು ಇದ್ದಾರೆ.