ಗಂಗಾವತಿ(ಕೊಪ್ಪಳ): ಕನಕಗಿರಿ ನವಲಿ ಹೋಬಳಿಯ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಒಂದು ಕೋಟಿ ರೂಪಾಯಿ ಮೌಲ್ಯದ ಮರಳನ್ನು ಅಕ್ರಮವಾಗಿ ಸಾಗಿಸಿರುವ ಪ್ರಕರಣ ನಡೆದಿದೆ.
ಕ್ಯಾರಿಹಾಳದ ಹನುಮಂತಪ್ಪ ದುರುಗಪ್ಪ ಕುರುಬರ, ಯಂಕಪ್ಪ ಜಡಿಯಪ್ಪ ಹಲರ್ ಪುರ, ಹನುಮಂತ ಜಡಿಯಪ್ಪ ಹಲರ್ ಪುರ ಹಾಗೂ ನಾಗರಾಜ ಜಡಿಯಪ್ಪ ಎಂಬುವರು ಇಲಾಖೆಯಿಂದ ಅಧಿಕೃತ ಅನುಮತಿ ಪಡೆಯದೇ ಅಕ್ರಮವಾಗಿ 97.37 ಲಕ್ಷ ಮೌಲ್ಯದ ಮರಳು ಕಳ್ಳತನ ಮಾಡಿ ಮರಳನ್ನು ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅದಿಕಾರಿಗಳು ಕನಕಗಿರಿ ಪೊಲೀಸ್ ಠಾಣೆಯಲ್ಲಿ ನಾಲ್ವರು ರೈತರ ವಿರುದ್ಧ ದೂರು ದಾಖಲಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಸೂಚನೆ ನೀಡಿದರು. ಈ ಹಿನ್ನೆಲೆ ಕನಕಗಿರಿ ಪೊಲೀಸ್ ಠಾಣೆಯ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮರಳನ್ನು ಅಕ್ರಮವಾಗಿ ಕಳ್ಳತನ ಮಾಡಿ ಸಾಗಿಸಲಾಗಿದೆ ಎಂದು ದೂರು ನೀಡಲಾಗಿದೆ.
ಇದನ್ನೂ ಓದು;ಅಕ್ರಮವಾಗಿ ಮರಳು ಸಾಗಿಸಲು ಬೇರೆ ಜಿಲ್ಲೆಯ ರಾಯಲ್ಟಿ ಮುದ್ರಣ: ಸಿಕ್ಕಿಬಿದ್ದ ಆರೋಪಿಗಳು