ಗಂಗಾವತಿ: ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಕಂದಾಯ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು, ಮಾಲು ಸಮೇತ ವಾಹನ ಜಪ್ತಿ ಮಾಡಿಕೊಂಡು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಂಗಾವತಿ ನಗರದಿಂದ ಮಲ್ಲಾಪುರದವರೆಗೆ ಹಮ್ಮಿಕೊಂಡಿದ್ದ ಗಸ್ತು ವೇಳೆ, ವ್ಯಕ್ತಿಯೊಬ್ಬ ಟ್ರಾಕ್ಟರ್ದಲ್ಲಿ ಅಕ್ರಮವಾಗಿ ಕಲ್ಲು ಹೇರಿಕೊಂಡು ನಗರಕ್ಕೆ ಸಾಗಿಸುತ್ತಿದ್ದನು. ಈ ಬಗ್ಗೆ ಗಮನಿಸಿದ ಅಧಿಕಾರಿಗಳು ತಡೆದು ವಿಚಾರಿಸಿದ್ದಾರೆ.
ಆದರೆ ಯಾವುದೇ ಇಲಾಖೆಯಿಂದ ಅಧಿಕೃತ ಅನುಮತಿ ಇಲ್ಲದೇ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ವಿಚಿತ್ರವೆಂದರೆ ಅಕ್ರಮ ಕಲ್ಲು ಸಾಗಿಸುತ್ತಿದ್ದ ಈ ವಾಹನದ ಎಂಜಿನ್ ಮತ್ತು ಟ್ರಾಲಿಗೆ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎನ್ನಲಾಗಿದೆ.