ಗಂಗಾವತಿ: ಕಂದಾಯ, ಗ್ರಾಮ ಪಂಚಾಯತ್ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ತಲೆ ಎತ್ತಿರುವ ರೆಸಾರ್ಟ್ಗಳನ್ನು ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿದರು.
ತಹಶೀಲ್ದಾರ್ ಎಲ್ ಡಿ ಚಂದ್ರಕಾಂತ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಲ್ಲಾಪುರದ ಗ್ರಾಮ ಲೆಕ್ಕಾಧಿಕಾರಿ ಮಹಾಲಕ್ಷ್ಮಿ ಅವರನ್ನು ಒಳಗೊಂಡ ತಂಡ, ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್ಗಳ ಸಮೀಕ್ಷೆ ನಡೆಸಿ ಪಟ್ಟಿ ಮಾಡಿಕೊಂಡಿದೆ.
ಆನೆಗೊಂದಿಯಲ್ಲಿ ಎರಡು, ಚಿಕ್ಕರಾಂಪುರದಲ್ಲಿ ಒಂದು, ಹನುಮನಹಳ್ಳಿ ಹಾಗೂ ಸಣಾಪುರದಲ್ಲಿ ತಲಾ ನಾಲ್ಕು ಅನಧಿಕೃತ ರೆಸಾರ್ಟ್ಗಳು ನಿರ್ಮಾಣವಾಗಿವೆ. ಇನ್ನೂ ಎರಡು ದಿನಗಳ ಕಾಲ ಸಮೀಕ್ಷೆ ನಡೆಸುತ್ತೇವೆ. ಸಮೀಕ್ಷೆ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಂದು ತಹಶೀಲ್ದಾರ್ ಹೇಳಿದರು.