ETV Bharat / state

ಕಂದಾಯ ಭೂಮಿಯಲ್ಲಿ ಅಕ್ರಮ ಮೊರಂ ಗಣಿಗಾರಿಕೆ: ಅಧಿಕಾರಿಗಳಿಂದ ದಾಳಿ - Gangavathi Revenue Lands news

ಅಕ್ರಮ ಮೊರಂ ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸೈಯದ್ ಫಾಜಿಲ್, ಕಂದಾಯ ನಿರೀಕ್ಷಕ‌ ಮಂಜುನಾಥ ಹಿರೇಮಠ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.

Illegal Mining in Revenue Lands in Gangavathi
ಅಕ್ರಮ ಗಣಿಗಾರಿಕೆ ಅಧಿಕಾರಿಗಳು ದಾಳಿ
author img

By

Published : May 27, 2020, 11:45 AM IST

ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಮ‌ದ ಸರ್ವೇ ನಂಬರ್ 32ರಲ್ಲಿರುವ ಕೃಷಿ ಹಾಗೂ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮೊರಂ ಗಣಿಗಾರಿಕೆಯಲ್ಲಿ ತೊಡಗಿದ್ದವರ ಮೇಲೆ ಅಧಿಕಾರಿಗಳು ದಾಳಿ ಮಾಡಿ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಮೊರಂ ಗಣಿಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಸೈಯದ್ ಫಾಜಿಲ್, ಕಂದಾಯ ನಿರೀಕ್ಷಕ‌ ಮಂಜುನಾಥ ಹಿರೇಮಠ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.

ಅಕ್ರಮ ಮೊರಂ ಗಣಿಗಾರಿಕೆ ಅಧಿಕಾರಿಗಳು ದಾಳಿ

ದಾಳಿ ಸಂದರ್ಭದಲ್ಲಿ ಆರೋಪಿಗಳು ಯಾವುದೇ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಕೃಷಿ ಜಮೀನಿನಲ್ಲಿ ಅಳವಾಗಿ ಗುಂಡಿ ತೋಡಿ ಮೊರಂ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಮಾಲೀಕ ರಾಜಪ್ಪ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಒಂದು ಟಿಪ್ಪರ್, ಹಿಟಾಚಿ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ರಮ ‌ಮೊರಂ ಗಣಿಗಾರಿಕೆಯ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.