ETV Bharat / state

ಜೆಡಿಎಸ್ ಸೇರಲು ನನಗೆ ಹುಚ್ಚು ಹಿಡಿದಿಲ್ಲ: ಸಂಸದ ಸಂಗಣ್ಣ ಕರಡಿ - ಕೊಪ್ಪಳ

ಚಡ್ಡಿ ಸುಡ್ತಾರೋ ಅಥವಾ ತಮ್ಮನ್ನು ತಾವೇ ಸುಟ್ಕೋತಾರೋ ಗೊತ್ತಿಲ್ಲ. ಈ ಚಡ್ಡಿ ಸುಡುವ ವಿಚಾರ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Karadi Sanganna Amarappa
ಸಂಗಣ್ಣ ಕರಡಿ
author img

By

Published : Jun 5, 2022, 5:33 PM IST

ಕೊಪ್ಪಳ: ಭಾರತೀಯ ಜನತಾ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಜೆಡಿಎಸ್ ಸೇರಲು ನನಗೆ ಹುಚ್ಚು ಹಿಡಿದಿಲ್ಲ. ನಾನು ಮಾಜಿ ಪ್ರಧಾನಿ ಹೆಚ್​ ಡಿ ದೇವೆಗೌಡ ಅವರ ವಯಸ್ಸಿನವರೆಗೂ ರಾಜಕಾರಣದಲ್ಲಿರುತ್ತೇನೆ‌. ಆದರೆ ಜೆಡಿಎಸ್ ಮಾತ್ರ ಎಂದಿಗೂ ಸೇರುವುದಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಡ್ಡಿ ಸುಡುವ ಅಭಿಯಾನ ಆರಂಭಿಸಿದ್ದಾರೆ. ಆದರೆ ಈ ವಿಷಯದಲ್ಲಿ ಚಡ್ಡಿ ಸುಡ್ತಾರೋ ಅಥವಾ ತಮ್ಮನ್ನು ತಾವೇ ಸುಟ್ಕೋತಾರೋ ಗೊತ್ತಿಲ್ಲ. ಈ ಚಡ್ಡಿ ಸುಡುವ ವಿಚಾರ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಒಬ್ಬ ನಾಯಕರಾದವರು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡಬಾರದು ಎಂದರು.

ಪರಿಷ್ಕೃತ ಪಠ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಪಠ್ಯವನ್ನ ಕಸದ ಬುಟ್ಟಿಗೆ ಹಾಕುವ ಪ್ರಮೇಯವಿಲ್ಲ. ಪಠ್ಯದಲ್ಲಿನ ತಪ್ಪುಗಳನ್ನ ಸರಿಪಡಿಸಲಾಗುವುದು ಎಂದು ಸಿಎಂ‌ ಹೇಳಿದ್ದಾರೆ. ರೋಹಿತ್ ಚಕ್ರತೀರ್ಥ ಅವರು ಪಠ್ಯ ಪರಷ್ಕರಣೆ ಮಾಡಲು ಅರ್ಹರಿರುವುದರಿಂದಲೇ ಅವರನ್ನು ಪಠ್ಯ ಪರಿಷ್ಕರಣ ಸಮಿತಿಗೆ ಸರ್ಕಾರ ನೇಮಕ ಮಾಡಿದೆ. ಯಾವುದಾದರೂ ಹೊಸ ಪ್ರಯೋಗದ ಸಂದರ್ಭದಲ್ಲಿ ಸಣ್ಣಪುಟ್ಟ ತಪ್ಪಾಗಳಾಗುವುದು ಸಹಜ. ಅದನ್ನು ಸರಿಪಡಿಸುವ ಕೆಲಸವೂ ನಡೆದಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಇದನ್ನೂ ಓದಿ: ಹೊಸ ಕಮಿಟಿ ಮಾಡಿ ಅಗತ್ಯ ಇದ್ದರೆ ಪಠ್ಯಕ್ರಮ ಪರಿಷ್ಕರಣೆ ಮಾಡಬೇಕು : ವಿಪಕ್ಷ ನಾಯಕ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.