ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ನಲ್ಲಿನ ಕಳೆದ ಒಂದು ದಶಕದಿಂದ ಪಾಳು ಬಿದ್ದಿರುವ ಸಾರ್ವಜನಿಕ ಉದ್ಯಾನ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ತೊಟ್ಟರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉದ್ಯಾನ ಸ್ವಚ್ಛಗೊಳಿಸಿದ ಅಧಿಕಾರಿಗಳು, ನೂರು ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಹಮ್ಮಿಕೊಂಡರು. ಸಸಿ ನೆಡುವ ಮೂಲಕ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಉದ್ಯಾನ ಅಭಿವೃದ್ಧಿಯ ರೂಪುರೇಷೆಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ನರೇಗಾದಲ್ಲಿ ಕೆಲಸ ಮಾಡುತ್ತಿರುವ ಗ್ರಾಮದ 800 ಕೂಲಿ ಕಾರ್ಮಿಕರಿಗೆ ತಲಾ ಒಂದೊಂದು ಸಸಿಗಳನ್ನು ಕೊಟ್ಟು ಮನೆಯ ಮುಂದೆ ನೆಟ್ಟು ಪೋಷಿಸುವಂತೆ ಸೂಚನೆ ನೀಡಿದ ಇಒ ಮೋಹನ್, ಬಳಿಕ ಸಸಿನೆಟ್ಟ ಚಿತ್ರ ಕಳಿಸುವಂತೆ ಸೂಚಿಸಿದರು.